ಬಿಎಂಟಿಸಿ ಸಿಬ್ಬಂದಿಗೆ ಭರ್ಜರಿ ಸುದ್ದಿ : ಆನ್ ಲೈನ್ ಮೂಲಕ ರಜೆ
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಕೆ ಸಂಸ್ಥೆಯು ತನ್ನ ಸಿಬ್ಬಂದಿಗೆ ಭರ್ಜರಿ ಸುದ್ದಿ ನೀಡಿದೆ. ಇನ್ಮುಂದೆ ಲಿಖಿತ ರೂಪದಲ್ಲಿ ಯಾವುದೇ ರಜೆ ಅರ್ಜಿಗಳ ಸ್ವೀಕೃತಿಯನ್ನು ಸಂಸ್ಥೆ ಸ್ಥಗಿತಗೊಳಿಸಿದ್ದು, ಮೊಬೈಲ್ ಮೂಲಕ ಸಿಬ್ಬಂದಿ ರಜೆ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದೆ. ಆನ್ ಲೈನ್ ಮೂಲಕ ಸಿಬ್ಬಂದಿ ರಜೆ ಪಡೆಯುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾರ್ಗಸೂಚಿನಲ್ಲಿ ಸಂಸ್ಥೆವು ಆನ್ ಲೈನ್ ಎಸ್‍ಎಂಎಸ್ ಮೂಲಕ ವಾರದ ರಜೆ, ಆಯ್ಕೆ ಮಾಡಿದ ಹಬ್ಬದ ರಜೆ, ಮಂಜೂರಾತಿ ದಿನದಂದು ಕರ್ತವ್ಯ ನಿರ್ವಹಿಸಿದಲ್ಲಿ ಪರ್ಯಾಯ ರಜೆಯನ್ನು ಕರ್ತವ್ಯ ನಿರ್ವಹಿಸಿದ 30 ದಿನಗಳೊಳಗಾಗಿ ಕಡ್ಡಾಯವಾಗಿ ಪಡೆಯಬೇಕಾಗಿದೆ. ಸಾಂದರ್ಭಿಕ ರಜೆ, ಇಎಲ್, ಸಿಎಂಎಲ್ ರಜೆಗಳನ್ನು ಒಂದೇ ಬಾರಿ ಪಡೆಯಲು ಅವಕಾಶವಿಲ್ಲ. ಒಂದು ಬಾರಿಗೆ ಆರು ಸಾಂದರ್ಭಿಕ ರಜೆಗಳನ್ನು ಮಾತ್ರ ಪಡೆಯಲು ಅವಕಾಶ ಕಲ್ಪಿಸಿದೆ. ಇಎಲ್ ಮತ್ತು ಸಿಎಂಎಲ್ ರಜೆ ಪಡೆಯುವ ಸಂದರ್ಭದಲ್ಲಿ ವಾರದ ರಜೆ, ಸಿಎಲ್ ಮತ್ತು ಪರ್ಯಾಯ ರಜೆ ಪಡೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು ಎಸ್ ಎಂಎಸ್ ಮೂಲಕ ರಜೆಯನ್ನು 30 ದಿನಗಳವರೆಗೆ ಮಾತ್ರ ಪಡೆಯಲು ಅವಕಾಶವಿದೆ.ರಜೆ ಮಂಜೂರಾಗಿದ್ದ ಹಿಂದಿನ ದಿನ ಕರ್ತವ್ಯಕ್ಕೆ ಗೈರು ಹಾಜರಾದರೆ ಮಂಜೂರಾಗಿದ್ದ ರಜೆಯನ್ನು ಪರಿಗಣಿಸುವುದಿಲ್ಲ ಪರಿವರ್ತಿತ ರಜೆ, ಗಳಿಕೆ ರಜೆ, ಸಾಂದರ್ಭಿಕ ರಜೆ ಬರುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸಿಬ್ಬಂದಿಯು ರಜೆ ರದ್ದತಿಯನ್ನು ರಜೆ ಪಡೆದಿರುವ ದಿನಾಂಕದ 48 ಗಂಟೆ ಮುಂಚಿತವಾಗಿ ರದ್ದುಪಡಿಸಬೇಕು. ಮೊಬೈಲ್ ಮೂಲಕ ರಜೆ ಸಲ್ಲಿಸಿದರೆ ಮಾತ್ರ ಘಟಕ ವ್ಯವಸ್ಥಾಪಕರಿಗೆ ರಜೆ ಮಂಜೂರು ಮಾಡಲು ಅವಕಾಶವಿರುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









