ಉತ್ತರಖಂಡದಲ್ಲಿ ಹಿಮಕುಸಿತ : ಮತ್ತೆ 6 ಮೃತದೇಹಗಳು ಪತ್ತೆ – ಸಾವಿನ ಸಂಖ್ಯೆ 44ಕ್ಕೆ ಏರಿಕೆ
ಉತ್ತರಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತದ ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಮುಮದುವರೆದಿದ್ದು, ಇಂದು ಮತ್ತೆ 6 ಮೃತದೇಹಗಳು ಪತ್ತೆಯಾಗಿವೆ. ಒಟ್ಟು ಈವರೆಗೂ ಪತ್ತೆಯಾದ ಮೃತದೇಹಗಳ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ತಪೋವನ ಸುರಂಗದಲ್ಲಿಇಂದು ಮತ್ತೆ 6 ಮೃತದೇಹಗಳು ಪತ್ತೆಯಾಗಿದೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ತಪೋವನ ಸುರಂಗದಲ್ಲಿ 2 ಮೃತದೇಹ ಮತ್ತು ರೈನಿ ಗ್ರಾಮದ ಕೆಸರಿನಡಿಯಲ್ಲಿ 4 ಮೃತದೇಹಗಳು ಪತ್ತೆಯಾಗಿವೆ. ಬಹುತೇಕ ಮೃತದೇಹಗಳನ್ನು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಉತ್ತರಾಖಂಡ ರಾಜ್ಯ ವಿಪತ್ತು ನಿರ್ಹಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇನ್ನೂ ಈವರೆಗೂ 160 ಜನ ನಾಪತ್ತೆಯಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಕೌಟುಂಬಿಕ ಪಿಂಚಣಿ ಮಿತಿ ಏರಿಕೆ..!
ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಸ್ಯಾಲರಿ ಕಟ್..!
ದೆಹಲಿ ರೈತಹೋರಾಟ : ಟೂಲ್ ಕಿಟ್ ಹಂಚಿಕೆ – ಬೆಂಗಳೂರಿನಲ್ಲಿ ಪರಿಸರ ಕಾರ್ಯರ್ತೆಯ ಬಂಧನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel