ನಿನ್ನೆ ರಾತ್ರಿ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕೊಟ್ಟ ಕರೆಗೆ ಇಡೀ ದೇಶವೇ ಬೆಂಬಲ ವ್ಯಕ್ತಪಡಿಸಿತ್ತು. ರಾತ್ರಿ 9 ಗಂಟೆಗೆ ಭಾರತೀಯರೆಲ್ಲರೂ ದೀಪ ಹಚ್ಚಿ ಏಕತೆಯ ಸಂದೇಶ ಸಾರಿದ್ರು.. ಅದರಲ್ಲಿ ಸಿನಿಮಾ ಜಗತ್ತಿನ ತಾರೆಯರು ಕೂಡ ಮೋದಿ ಕರೆಗೆ ಬೆಂಬಲ ಸೂಚಿಸಿದ್ರು.
ಸ್ವಿಮಿಂಗ್ ಪೂಲ್ ನಲ್ಲಿ ಕಿಚ್ಚ ಸುದೀಪ್ ಕ್ಯಾಂಡಲ್ ಹಚ್ಚಿದ್ರೆ, ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ಕ್ಯಾಂಡಲ್ ಹಿಡಿದು ಮೋದಿ ಕರೆಗೆ ಬೆಂಬಲ ಸೂಚಿಸಿದ್ರು.
ಜೊತೆಗೆ ಬೆಂಗಳೂರಿನ ಮನೆಯಲ್ಲಿ ನಟಿ ಕಾರುಣ್ಯ ದೀಪ ಬೆಳಗಿದ್ದಾರೆ. ಪುನೀತ್ ರಾಜ್ ಕುಮಾರ್, ಡಾಲಿ ಧನಂಜಯ್ , ದೀಪಿಕಾ ದಾಸ್ ಸೇರಿದಂತೆ ಹಲವರು ದೀಪ ಬೆಳಗಿದ್ದಾರೆ.
ಅತ್ತ ಟಾಲಿವುಡ್ ನ ದಿಗ್ಗಜರಾದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಹಲವರು ದೀಪ ಹಚ್ಚಿ ಮೋದಿ ಮಾತಿಗೆ ಗೌರವ ಸಲ್ಲಿಸಿದ್ದಾರೆ.








