ನಿಮಗಿಷ್ಟವಾಗುವ ಸುದ್ದಿಗಳು : Interesting News
500 ವರ್ಷಗಳಿಂದ ಕಬ್ಬಿಣದ ಸರಪಳಿಗಳಿಂದ ಬಂಧಿಯಾಗಿದ್ದಾನೆ ಸೃಷ್ಠಿಕರ್ತ..!
ಚಿಕ್ಕಮಗಳೂರು : ಭಾರತದಲ್ಲಿ ಪ್ರತಿವೊ0ದು ಆಚರಣೆಯ ಹಿಂದೆ ಒಂದು ಅರ್ಥ ಇರುತ್ತೆ. ಹಾಗೇ ಪ್ರತಿ ನಂಬಿಕೆ ಹಿಂದೆ ಹಲವಾರು ಕಥೆಗಳು ಇರುತ್ವೆ. ಹಳ್ಳಿ ಭಾಗಗಳಲ್ಲಿ ಪ್ರತಿ ದೇವಾಲಯದ ಹಿಂದೆ ಒಂದು ಜನಪದ ಕಥೆ ಇರುತ್ತೆ. ಆ ಕತೆಗಳನ್ನು ಕೇಳಿದ್ರೆ ಈ ಕಾಲದಲ್ಲೂ ಇದೇಲ್ಲಾ ನಡೆಯುತ್ತಾ..? ಹೀಗೆಲ್ಲಾ ಆಗುತ್ತಾ ಅಂತ ಅನಿಸುತ್ತೆ.
ಅದೇ ರೀತಿ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದ ದೇವಾಲಯದಲ್ಲಿ ನಡೆಯುತ್ತಿರುವ ಒಂದು ಪದ್ಧತಿ ಕೂಡ ಸಾಕಷ್ಟು ಆಶ್ಚರ್ಯವನ್ನುಂಟು ಮಾಡುತ್ತೆ.
ಇಲ್ಲಿ ಸುಮಾರು 500 ವರ್ಷಗಳಿಂದ ಸೃಷ್ಟಿಕರ್ತ ಕೆಂಚರಾಯಸ್ವಾಮಿಯನ್ನ ಕಬ್ಬಿಣದ ಸರಪಳಿಯಿಂದ ಬಂಧಿಸಲಾಗಿದೆ. ಇದಕ್ಕೆ ಕಾರಣ ಕೆಂಚರಾಯ ಸ್ವಾಮಿ 2036 ಎಕರೆ ನೀರನ್ನು ಮೂರೇ ಬೊಗಸೆಯಲ್ಲಿ ಕುಡಿದು ಮುಗಿಸುತ್ತಾನೆ ಅಂತಾ.. ಇದು ಅಚ್ಚರಿ ಎನಿಸಿದ್ರೂ ನೀವು ನಂಬಲೇಬೇಕು.
ಇಲ್ಲಿನ ಜನರಿಗೆ ಸಖರಾಯಪಟ್ಟಣದ ಸರಪಳಿ ಕೆಂಚರಾಯ ಸ್ವಾಮಿ ಅಂದ್ರೆ ಭಕ್ತಿ ಮತ್ತು ಭಯ ಒಟ್ಟಿಗೆ ಬರುತ್ತೆ. ಈ ಕೆಂಚರಾಯ ಸ್ವಾಮಿ ಅಯ್ಯನಕೆರೆ ನೀರನ್ನ ಮೂರೇ ಬೊಗಸೆಯಲ್ಲಿ ಕುಡಿದು ಖಾಲಿ ಮಾಡುತ್ತಾನೆ ಅನ್ನೋ ನಂಬಿಕೆ ಇಲ್ಲಿನವರಲ್ಲಿದ್ದು, ಇದಕ್ಕೆ ಹೆದರಿ ಕಳೆದ 500 ವರ್ಷಗಳಿಂದ ದೇವರ ಮೂರ್ತಿಯನ್ನ ಕಬ್ಬಿಣದ ಸರಪಳಿಯಿಂದ ಬಂಧಿಸಿದ್ದಾರೆ.
ವಾವ್ಹಾ…! ಆಸ್ಪತ್ರೆ ಮೆನುವಿನಲ್ಲಿ ಚಿಕನ್ ಸಾಂಬಾರ್ : ರೋಗಿಗಳಿಗೆ ಮಾತ್ರ..!
ಹೈದರಾಬಾದ್ : ಆಸ್ಪತ್ರೆ ಊಟ , ರೋಗಿಗಳಿಗೆ ನೀಡುವ ಊಟ ಅಂದ್ರೆ ಹೇಳಿ ಕೇಳಿ ಹೇಗಿರುತ್ತೆ ಎಲ್ರಿಗೂ ಅನುಭವ ಆಗೇ ಆಗಿರುತ್ತೆ. ರುಚಿಯಾದ ಮಸಾಲೆದಾರ್ ಊಟ ಸಿಗೋದು ದೂರದ ಮಾತು, ಸರರಿಯಾಗಿ ಉಪ್ಪು, ಖಾರ , ಹುಳಿ ಇರೋ ಊಟವೂ ರೋಗಿಗಳಿಗೆ ಸಿಗೋದಿಲ್ಲ. ಅಂತ್ರದಲ್ಲಿ ರೋಗಿಗಳಿಗೆ ಆಹಾರದ ಮೆನುನಲ್ಲಿ ಚಿಕನ್ ಸೇರಿಸಿದ್ದಾರೆ ಎಂದರೆ ಆಶ್ಚರ್ಯ ಆಗದೇ ಇರುತ್ತಾ.
ಎಸ್ ಕ್ಷಯ ರೋಗಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಕ್ಷಯ ರೋಗಿಗಳಿಗೆ ಚಿಕನ್ ಸಾಂಬಾರ್ ಅನ್ನು ಒದಗಿಸುತ್ತಿದೆ. ಕ್ಷಯ ರೋಗದಿಂದ ಬಹುಬೇಗನೇ ಗುಣಮುಖರಾಗಲು ಆಸ್ಪತ್ರೆಯ ಮೆನುವಿನಲ್ಲಿ ಚಿಕನ್ ಸಾಂಬರ್ ಸೇರಿಸಿರುವ ಸರ್ಕಾರ, ಅಗತ್ಯವಿರುವ ಪೋಷಕಾಂಶಗಳನ್ನು ರೋಗಿಗಳಿಗೆ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಹೀಗಾಗಿ ವಾರಕ್ಕೆ (ಬುಧವಾರ) ಒಂದು ಬಾರಿ ಚಿಕನ್ ಸಾಂಬಾರ್ ನೀಡಲಾಗುವುದು. ಉಳಿದಂತೆ ಪ್ರತಿ ದಿನ ಎರಡು ಮೊಟ್ಟೆಗಳನ್ನು ನೀಡಲಾಗುವುದು. ರಾಜ್ಯದಲ್ಲೇ ಮೊದಲ ಬಾರಿಗೆ ಖಮ್ಮಮ್ ಜಿಲ್ಲೆಯಲ್ಲಿರುವ ಕ್ಷಯ ರೋಗ ವಿಭಾಗದಲ್ಲಿ ಈ ಯೋಜನೆಯನ್ನು ಬುಧವಾರ ಆರಂಭಿಸಲಾಗಿದೆ.
ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಸ್ಯಾಲರಿ ಕಟ್..!
ಉತ್ತರಪ್ರದೇಶ: ಮಕ್ಕಳನ್ನ ಕಷ್ಟ ಪಟ್ಟು ಅವರಿಗೆ ಜೀವನಕ್ಕೆ ಬೇಕಾದ ದಾರಿ ಮಾಡಿಕೊಟ್ಟು , ಅವರು ತಮ್ಮ ಕಾಲಿನ ಮೇಲೆ ನಿಲ್ಲುವುದಕ್ಕೆ ನೆರವಾಗುವ ತಂದೆ ತಾಯಿಯನ್ನ ವಯಸ್ಸಾದ ಮೇಲೆ ಮಕ್ಕಳು ನಿರ್ಲಕ್ಷ್ಯ ಮಾಡಿ ಬೀದಿಗೆ ತಳ್ಳಿರುವುದನ್ನ ನಾವು ನೋಡುತ್ತಲೇ ಇರುತ್ತೇವೆ.
ಆದ್ರೆ ಇಂತಹದ್ದೇ ತಪ್ಪು ಮಾಡಿದ ಮಕ್ಕಳಿಗೆ ಮಹಾರಾಷ್ಟ್ರದಲ್ಲಿ ವಿಧಿಸಲಾದ ಶಿಕ್ಷೆ ನೊಡಿದ್ರೆ ಎಲ್ಲೆಡೆ ಈ ರೀತಿ ನಿಯಮ ಜಾರಿ ಮಾಡಿದ್ರೆ ಚೆನ್ನಾಗಿರುತ್ತೆ. ಆಗಲಾದ್ರೂ ತಂದೆ ತಾಯಿಯನ್ನ ಮಕ್ಕಳು ಅಲಕ್ಷ್ಯ ಮಾಡುವುದಿಲ್ಲ ಎನ್ನಿಸುತ್ತೆ.
ಹೌದು ವಯಸ್ಸಾದ ಹೆತ್ತವರನ್ನು ನಿರ್ಲಕ್ಷಿಸಿದವರಿಗೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯೊಂದು ತಕ್ಕ ಶಿಕ್ಷೆಯನ್ನೇ ನೀಡಿದೆ. ಅಪ್ಪ-ಅಮ್ಮನನ್ನು ನೋಡಿಕೊಳ್ಳದ 7 ಮಂದಿ ಉದ್ಯೋಗಿಗಳ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗಿದೆ ಎಂದು ಇಲ್ಲಿನ ಲಾತೂರು ಜಿಲ್ಲಾ ಪರಿಷತ್ ಅಧ್ಯಕ್ಷ ರಾಹುಲ್ ಬೋಂದ್ರೆ ತಿಳಿಸಿದ್ದಾರೆ.
ವೇತನದಿಂದ ಕಡಿತವಾದ ಮೊತ್ತವನ್ನು ಆಯಾ ಉದ್ಯೋಗಿಯ ಹೆತ್ತವರ ಖಾತೆಗೆ ಜಮೆ ಮಾಡಲಾಗುತ್ತದೆ. ಕಳೆದ ನವೆಂಬರ್ ನಲ್ಲಿ ಜಿಲ್ಲಾ ಪರಿಷತ್ ಇಂಥದ್ದೊಂದು ತೀರ್ಮಾನ ಕೈಗೊಂಡಿತ್ತು. ಹೆತ್ತವರ ನಿರ್ಲಕ್ಷ್ಯಕ್ಕೆ ಸಂಬಂಧಿಸಿ 12 ದೂರುಗಳು ಬಂದಿದ್ದು, ಈ ಪೈಕಿ 7 ಮಂದಿಯ ವೇತನ ಕಡಿತಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಬ್ರೆಡ್ ಗುಲಾಬ್ ಜಾಮೂನ್
ಬ್ರೆಡ್ ಗುಲಾಬ್ ಜಾಮೂನ್ Saakshatv cooking recipes Gulabjamun
ಪದಾರ್ಥಗಳು
1 ಕಪ್ ಸಕ್ಕರೆ
1/2 ಕಪ್ ನೀರು
1 1/2 ಟೀಸ್ಪೂನ್ ಏಲಕ್ಕಿ ಪುಡಿ
3 ಟೀಸ್ಪೂನ್ ನಟ್ಸ್( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ)
1 ಟೀಸ್ಪೂನ್ ಗುಲ್ಕಂಡ್ / ರೋಸ್ ಪೆಟಲ್ ಜಾಮ್
6 ಬ್ರೆಡ್ ಚೂರುಗಳು
ಒಂದು ಪಿಂಚ್ ಅಡಿಗೆ ಸೋಡಾ
ಅಗತ್ಯವಿರುವಷ್ಟು ಹಾಲು Saakshatv cooking recipes Gulabjamun
ಪ್ಯಾನ್ ಅನ್ನು ಹೆಚ್ಚಿನ ಶಾಖದಲ್ಲಿ ಬಿಸಿ ಮಾಡಿ.ಸಕ್ಕರೆ ಮತ್ತು ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
ಸಕ್ಕರೆ ಕರಗಿದಾಗ ಮತ್ತು ಸಿರಪ್ ಕುದಿ ಬರಲು ಪ್ರಾರಂಭವಾದಾಗ ತಾಪಮಾನವನ್ನು ಕಡಿಮೆ ಮಾಡಿ.
ಸಿರಪ್ ಅನ್ನು 7-8 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಕೆಳಗಿಳಿಸಿ.
ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಸಕ್ಕರೆ ಪಾಕ ರೆಡಿಯಾಗಿದೆ.
ಒಂದು ಪಾತ್ರೆಯಲ್ಲಿ ಗುಲ್ಕಂಡ್ (ಗುಲಾಬಿ ದಳಗಳ ಜಾಮ್) ತೆಗೆದುಕೊಳ್ಳಿ. ಅದಕ್ಕೆ ನಟ್ಸ್ ಗಳನ್ನು ( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ) ಸೇರಿಸಿ.
ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದರ ಸಣ್ಣ ಉಂಡೆಗಳನ್ನಾಗಿ ಮಾಡಿ. ಇದನ್ನು ಸ್ವಲ್ಪ ಸಮಯದವರೆಗೆ ರೆಫ್ರಿಜರೇಟರ್ನಲ್ಲಿ ಇರಿಸಿ.
ಬ್ರೆಡ್ ತುಂಡುಗಳನ್ನು ತೆಗೆದುಕೊಳ್ಳಿ. ಬ್ರೆಡ್ ನ ಅಂಚುಗಳನ್ನು ಕತ್ತರಿಸಿ. ಈಗ ಬ್ರೆಡ್ ಅನ್ನು ಸಣ್ಣ ತುಂಡುಗಳನ್ನು ಮಾಡಿ ಪುಡಿ ಮಾಡಿ.
ಅಡಿಗೆ ಸೋಡಾ ಸೇರಿಸಿ. ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
ಬ್ರೆಡ್‌ನ ತಾಜಾತನಕ್ಕೆ ಅನುಗುಣವಾಗಿ ಹಾಲಿನ ಪ್ರಮಾಣವನ್ನು ಹೊಂದಿಸಿ. ಅರೆ ಮೃದುವಾದ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ.
ರೆಫ್ರಿಜರೇಟರ್ನಲ್ಲಿ ಇರಿಸಿದ ಮಿಶ್ರಣವನ್ನು ಬೆರೆಸಿಕೊಳ್ಳಿ. ಇದನ್ನು ಸಣ್ಣ ಚೆಂಡುಗಳನ್ನಾಗಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಗುಲಾಬ್ ಜಾಮೂನ್‌ಗಳನ್ನು ಕಡಿಮೆ ಶಾಖದಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
ಗುಲಾಬ್ ಜಾಮೂನ್‌ಗಳನ್ನು ಹುರಿದ ನಂತರ, ಅವುಗಳನ್ನು ಬೆಚ್ಚಗಿನ ಸಕ್ಕರೆ ಪಾಕದಲ್ಲಿ ಬಿಡಿ. ಸಿರಪ್ ನಲ್ಲಿ 2-3 ಗಂಟೆಗಳ ಕಾಲ ಬಿಡಿ. ಈಗ ಸಕ್ಕರೆ ಪಾಕದ ಜೊತೆಗೆ ಬ್ರೆಡ್ ಗುಲಾಬ್ ಜಾಮೂನ್‌ಗಳನ್ನು ಸವಿಯಿರಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








