ಮೈಸೂರು: ಲಾಕ್ ಡೌನ್ ಹಿನ್ನೆಲೆ ಕಳೆದ 15 ದಿನಗಳಿಂದ ಬಾಗಿಲು ಮುಚ್ಚಿದ್ದ ಚಾಮುಂಡೇಶ್ವರಿ ದೇವಾಲಯ ಇಂದು ಮತ್ತೆ ಓಪನ್ ಆಗಿದೆ. ವಸಂತ ನವರಾತ್ರಿ ಅಂಗವಾಗಿ ದೇವಿಗೆ ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ.
ಸದ್ಯ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಅರ್ಚಕ ಸಮೂಹ ಪೂಜೆಯಲ್ಲಿ ತೊಡಗಿದೆ. ಕೊರೊನಾ ವೈರಸ್ ಹರಡುವ ಭೀತಿಯಿಂದ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ ಸರಳವಾಗಿ ಚಾಮುಂಡೇಶ್ವರಿಯ ವಸಂತೋತ್ಸವ ಅಚರಿಸಲಾಗುತ್ತಿದೆ.