ರೈತರೇ ಗಮನಿಸಿ : ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಆಗ್ತಿದೆ ಭಾರೀ ಬದಲಾವಣೆ..!
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಭಾರೀ ಬದಲಾವಣೆಯಾಗ್ತಿದೆ. ಸ್ವಂತ ಹೆಸರಲ್ಲಿ ಭೂಮಿ ಹೊಂದಿದ ರೈತರಿಗೆ ಮಾತ್ರ 6,000 ರೂ. ನೀಡಲಾಗುತ್ತದೆ. ತಮ್ಮ ಹೆಸರಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರ 6000 ರೂ. ಸಿಗಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಕ್ರಮ ಕೈಗೊಂಡಿದೆ. ಈಗಿರುವ ಮಾನದಂಡಗಳೊಂದಿಗೆ ತಮ್ಮ ಹೆಸರಲ್ಲಿ ಜಮೀನು ಹೊಂದಿದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6000 ರೂ. ನೀಡಲಾಗುತ್ತದೆ. ರೈತರು ಯೋಜನೆಯ ಪ್ರಯೋಜನ ಪಡೆಯಲು ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳಬೇಕು. ಇನ್ನೂ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳದ ರೈತರಿಗೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಹೇಳಲಾಗಿದೆ.
ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಹೀಗೆ ಮಾಡಿದರೆ ಅಷ್ಟಐಶ್ವರ್ಯ ನಿಮ್ಮ ಹಿಂದೆ ಸಾಲುಸಾಲಾಗಿ ಪ್ರಾಪ್ತಿಯಾಗುತ್ತದೆ..!!
ಜಮೀನನ್ನು ಬಾಡಿಗೆ ಪಡೆದು ಉಳುಮೆ ಮಾಡುವವರಿಗೆ, ತಂದೆ ಅಥವಾ ಅಜ್ಜನ ಹೆಸರಲ್ಲಿ ಜಮೀನಿದ್ದು ಮೊಮ್ಮಗ ಉಳುಮೆ ಮಾಡುತ್ತಿದ್ದರೂ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ತಮ್ಮ ಹೆಸರಲ್ಲಿ ಜಮೀನಿನ ಮಾಲೀಕತ್ವ ಹೊಂದಿರಬೇಕೆಂದು ಹೇಳಲಾಗಿದೆ. ಬಹುತೇಕ ರೈತರು ತಮ್ಮ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಂಡಿಲ್ಲದ ಕಾರಣ ಅವರಿಗೆ ಯೋಜನೆ ಪ್ರಯೋಜನೆ ಕೈತಪ್ಪಲಿದೆ ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








