ವಕ್ಫ್ ಆಸ್ತಿ ಕಬಳಿಕೆ ವಿಚಾರ : ದೂರು ನೀಡಲು ಬಂದ ನಾಲ್ವರಿಗೆ ಮುಸ್ಲಿಂ ಮುಖಂಡರಿಂದ ಬಹಿಷ್ಕಾರ..!
ಯಾದಗಿರಿ : ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ದೂರು ನೀಡಲು ಬಂದ ನಾಲ್ವರಿಗೆ ಯಾದಗಿರಿಯ ಹುಣಸಗಿ ಪೊಲೀಸ್ ಸ್ಟೇಷನ್ ಎದುರಲ್ಲೇ ಮುಸ್ಲಿಂ ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ದಾರ್ಮಿಕ ಕಾರ್ಯ, ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗದಂತೆ ಆದೇಶ. ಮದುವೆ ಸಮಾರಂಭಗಳು ಹಾಗೂ ನಮಾಜ್ ಗೂ ಹೋಗದಂತೆ ಮುಸ್ಲಿಂ ಮುಖಂಡರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಬಿಗ್ ನ್ಯೂಸ್ : ಎಲ್ ಪಿಜಿ ಸಿಲಿಂಡರ್ ದರ 50 ರೂ. ಏರಿಕೆ
ಹುಣಸಗಿಯ ದಾವಲ್ ಸಾಬ್ ಬೆಣ್ಣೂರು, ಹುಸೇನ್ ಸಾಬ್ ಗಾದಿ, ಸೂಫಿ ಸಾಬ್, ಹಸನ್ ಸಾಬ್ ಅವರಿಗೆ ಬಹಿಷ್ಕಾರ ಹಾಕಲಾಗಿದೆ. 6 ಎಕರೆ ಖಬರಾಸ್ತಾನ ಆಸ್ತಿಯಲ್ಲಿ 2 ಎರಡು ಎಕರೆ ಒತ್ತುವರಿ ವಿವಾದದ ವಿಚಾರವಾಗಿ ಹುಣಸಗಿ ಪಟ್ಟಣದ ಕೆಂಬಾವಿ ರಸ್ತೆ ಬಳಿಯ ಸರ್ವೆ ನಂಬರ್ 456 ಖಬರಸ್ಥಾನ ವಕ್ಫ ಪ್ರಾಪರ್ಟಿ ಒತ್ತುವರಿ ಮಾಡಿರೋದನ್ನ ಪ್ರಶ್ನಿಸಿದ್ದಕ್ಕೆ ಈ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನಲ್ಲಿ ಈ ಅಪ್ಲಿಕೇಶನ್ ಇದ್ದರೆ ಕೂಡಲೇ ಆನ್ಇನ್‌ಸ್ಟಾಲ್ ಮಾಡಿ !
ಮೊಹಮ್ಮದ್ ಆದಂ ಖಾಜಿ ಸೇರಿದಂತೆ ನಾಲ್ವರು ಸಯ್ಯದ್ ಮುರ್ತಜಾ ಖಾದ್ರಿ ಬೆಣ್ಣೂರು ಕುಟುಂಬದ ವಿರುದ್ಧ ಆಸ್ತಿ ಕಬಳಿಕೆ ಆರೋಪ ಹೊರಸಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಶ್ನೆ ಮಾಡಿದ್ದ ನಾಲ್ವರ ವಿರುದ್ಧವೇ ಬೆಣ್ಣೂರು ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಇವರನ್ನ ಕರೆಸಿ ಸಮಾಜದ ವಿಚಾರ ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಲು ನಿರ್ದೇಶನ ನೀಡಿದ್ದರು. ಆದ್ರೆ ಸಭೆ ಹೆಸರಲ್ಲಿ ಪೊಲೀಸ್ ಠಾಣೆ ಎದುರಲ್ಲೇ ನಾಲ್ವರಿಗೆ ಬಹಿಷ್ಕಾರ ಹಾಕಲಾಗಿದೆ.
ಚಾಮರಾಜನಗರ: ಹಾಡು ಹಗಲೇ ರಸ್ತೆ ದಾಟುವ ಗಜ ಪಡೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel