ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಲೈಟ್ ಆಫ್ ಮಾಡಿ, ಮನೆಯ ಮುಂದೆ ಅಥಾವ ಬಾಲ್ಕನಿಯಲ್ಲಿ ನಿಂತು ದೀಪ, ಮೇಣದ ಬತ್ತಿ, ಅಥಾವ ಮೊಬೈಲ್ ಪ್ಲ್ಯಾಶ್ ಬೆಳಗಿಸಲು ಹೇಳಿದರು. ಪಿ.ಎಂ ಮೋದಿ ಕರೆಗೆ ಇಡಿ ದೇಶವೇ ಸ್ಪಂದಿಸಿತ್ತು. ದೀಪ ಬೆಳಗಿಸುವ ಮೂಲಕ ಕೊರೊನಾ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶನ ಮಾಡಲಾಗಿತ್ತು. ಆದರೆ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಾತ್ರ ಒಗ್ಗಟ್ಟಿನ ಬದಲಾಗಿ ಒಡಕು ಮೂಡಿದೆ.
ನರೇಂದ್ರ ಮೋದಿ ಮನೆಯಲ್ಲಿ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ಹೇಳಿದ್ದರು. ಬೆಳಗಾವಿಯ ಜೆಲ್ಲೆಯ ಮಸೀದಿಯಲ್ಲಿ ಲೈಟ್ ಆಫ್ ಆಗಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವರು ಮಸೀದಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಮಸೀದಿಯಲ್ಲಿ ಲೈಟ್ ಆಫ್ ಮಾಡದ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ಮಸೀದಿಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾಗಿದ್ದ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಇದೆ ಮಾದರಿಯಲ್ಲಿ ನಿಪ್ಪಾಣಿ ತಾಲೂಕಿನ ಮಸೀದಿಯಲ್ಲು ಘಟನೆ ನಡೆದಿದೆ. ಹಾಗಾಗಿ ಅಲ್ಲಿಯೂ ಸಹ 13 ಜನರನ್ನು ಬಂಧಿಸಿ ಪ್ರಕರಣ ದಾಖಲು ಮಾಡಲಾಗಿದೆ.








