ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೂಟ್ಟು ನಿನ್ನೆ ರಾತ್ರಿ 9 ಗಂಟೆಗೆ ದೇಶದ ಜನರೆಲ್ಲಾ ದೀಪ ಬೆಳಗಿಸಿದ್ರು. ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು, ಸಾಮಾನ್ಯ ಜನರು ತಮ್ಮ ಮನೆಗಳಲ್ಲಿ 9 ನಿಮಿಷಗಳ ಕಾಲ ದೀಪವನ್ನು ಹಚ್ಚಿದ್ರು.
ಇದೆಲ್ಲದರ ಮಧ್ಯೆ ಗುಜರಾತ್ ನ ಬರೂಚ್ ನಲ್ಲಿ ಸೂರಿಲ್ಲದವರು, ಊರು- ಸೂರು ಇಲ್ಲದ ನಿರಾಶ್ರಿತರು ಕೂಡ ಪ್ರಧಾನಿ ಕರೆಯನ್ನು ಸ್ವೀಕರಿಸಿ ದೀಪ ಬೆಳಗಿಸಿ ಏಕತೆಯ ಸಂದೇಶ ಸಾರಿದ್ರು.
ಬರೂಚ್ ನಲ್ಲಿ ನಿನ್ನೆ ಕೆಲವರು ರಸ್ತೆ ಬದಿ ಕುಳಿತು ಮೊಂಬತ್ತಿ ಹಚ್ಚಿದ್ದು ಕಂಡುಬಂತು. ಅದೇ ರೀತಿ ಇನ್ನೂ ಹಲವಾರು ಕಡೆ ಇರಲು ಮನೆ ಇಲ್ಲದೇ ಬೀದಿ ಬದಿ ಜೀವನ ನಡೆಸುತ್ತಿರೋರು ಹಣತೆ ಹಚ್ಚಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.








