ಬ್ಲೇಡ್ ನಿಂದ ಬೇಕಾಬಿಟ್ಟು ಮೈ ಕೊಯ್ದುಕೊಂಡ ವೈದ್ಯ..!
ಗದಗ : ಜನರಿಗೆ ಬುದ್ದಿ ಹೇಳಿ ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಜನರ ಜೀವನ ಉಳಿಸಬೇಕಾದ ಕರ್ತವ್ಯ ವೈದ್ಯರಿಗೆ ಹೆಚ್ಚಾಗಿರುತ್ತೆ. ಆದ್ರೆ ಇಲ್ಲೊಬ್ಬ ವೈದ್ಯ ಅವಿವೇಕೆತನಕ್ಕೆ ಸಾಕ್ಷಿಯಾಗಿದ್ದಾನೆ. ದೇಹಕ್ಕೆ ಬೇಕಾಬಿಟ್ಟಿ ಬ್ಲೇಡ್ ಹಾಕಿಕೊಂಡು ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.
ಬೊಮ್ಮನಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲೇ 103 ಮಂದಿಗೆ ಪಾಸಿಟಿವ್ : ಬಿಬಿಎಂಪಿ
ಬೇಕಾಬಿಟ್ಟಿ ಬ್ಲೇಡ್ ನಿಂದ ಕುಯ್ದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೈದ್ಯನನ್ನ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೈದ್ಯನನ್ನ ಕುಟುಂಬದ ಸದಸ್ಯರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಗದಗ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಪಕ್ಷದ ಆಜ್ಞೆಯನ್ನ ಮೀರುವುದಿಲ್ಲ – ಸವದಿ ಪುತ್ರ
ಈತ ಮೊದಲಿಗೆ ಮನೆ ಕಿಟಕಿ ಗ್ಲಾಸ್ ಪುಡಿ ಪುಡಿಮಾಡಿ ಆನಂತರ ದೇಹಕ್ಕೆ ಬ್ಲೇಡ್ ಹಾಕಿಕೊಂಡಿದ್ದಾನೆ. ಆದ್ರೆ ಈತ ಹೀಗೆ ಮಾಡಿಕೊಂಡಿರುವುದಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಗದಗ ನಗರದ ನಂದೀಶ್ವರ ಮಠದ ಹಿಂಭಾಗದಲ್ಲಿ ಈತ ಕುಟುಂಬದ ಜೊತೆಗೆ ವಾಸಿಸುತ್ತಿದ್ದ ಎನ್ನಲಾಗಿದೆ.