ವಾವ್…! ಕಂಪನಿ ಕರೆಗಳ ಕರೆಗಳಿಂದ ಮೊಬೈಲ್ ಬಳಕೆದಾರರಿಗೆ ಮುಕ್ತಿ..!
ನವದೆಹಲಿ: ಕಂಪನಿ ಕರೆಗಳಿಂದ ಇರಿಟೇಟ್ ಆಗ್ತಿರುವ ಜನರಿಗೆ ಸೂಪರ್ ಕೂಲ್ ನ್ಯೂಸ್ ಸಿಕ್ಕಿದೆ. ಹೌದು ಇಂತಹ ಕಂಪನಿ ಕರೆಗಳು ಗ್ರಾಹಕರಿಗೆ ತೊಂದರೆ ನೀಡದಂತೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ದೂರಸಂಪರ್ಕ ಸಚಿವ ರವಿ ಶಂಕರ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಭೆಯಲ್ಲಿ ಸಚಿವ ರವಿ ಶಂಕರ್ ಪ್ರಸಾದ್ ಅವ್ರು, ಕಂಪನಿಗಳು ಕರೆಗಳ ಮೂಲಕ ಚಂದಾದಾರರಿಗೆ ನೀಡ್ತಿರುವ ಕಿರುಕುಳವನ್ನ ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಟೆಲಿಕಾಂ ಸಂಪನ್ಮೂಲಗಳಿಗೆ ಸಂಬಂಧಿಸಿದ ವಂಚನೆಯ ಚಟುವಟಿಕೆಗಳ ತನಿಖೆಗಾಗಿ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಏಜೆನ್ಸಿಯಾದ ಡಿಜಿಟಲ್ ಇಂಟೆಲಿಜೆನ್ಸ್ ಘಟಕವನ್ನ ಸ್ಥಾಪಿಸಲು ನಿರ್ಧರಿಸಿದ್ದಾರೆ.
ಈ ವಂಚನೆ ನಿರ್ವಹಣೆ ಮತ್ತು ಗ್ರಾಹಕ ರಕ್ಷಣಾ ವ್ಯವಸ್ಥೆಗಳನ್ನ ಪರವಾನಗಿ ನಿರ್ವಹಣೆ ವಲಯದ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಟೆಲಿಕಾಂ ಸಂಪನ್ಮೂಲಗಳ ದುರ್ಬಳಕೆಯಿಂದ ಉಂಟಾಗುವ ಆರ್ಥಿಕ ವಂಚನೆಗಳನ್ನ ತಡೆಗಟ್ಟಲು ವಾಣಿಜ್ಯೇತರ ಸಂವಹನಗಳ ಪರಿಣಾಮಕಾರಿ ಕಾರ್ಯಾಚರಣೆಗಾಗಿ ವೆಬ್, ಮೊಬೈಲ್ ಅಪ್ಲಿಕೇಶನ್ ಮತ್ತು ಎಸ್ ಎಂಎಸ್ ಆಧಾರಿತ ವ್ಯವಸ್ಥೆಯನ್ನ ಅಭಿವೃದ್ಧಿಪಡಿಸಲು ಒತ್ತು ನೀಡಿದೆ.
ಹೋಂಡಾ ಕಂಪನಿಯ ಹೊಸ ವಿನ್ಯಾಸದ ಬೈಕ್ ಹೋಂಡಾ ಸಿಬಿ 350 ಆರ್ ಎಸ್ ಶೀಘ್ರವೇ ಮಾರುಕಟ್ಟೆಗೆ
ಸಭೆಯಲ್ಲಿ ಸಚಿವರು, ಪದೇ ಪದೇ ಕರೆ ಮತ್ತು ಎಸ್ ಎಂ ಎಸ್ʼಗಳ ಮೂಲಕ ಗ್ರಾಹಕರ ಮೇಲೆ ದೌರ್ಜನ್ಯ ನಡೆಸುವ ವ್ಯಕ್ತಿಗಳು ಮತ್ತು ಟೆಲಿಕಾಂ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕಿರುಕುಳದ ವಿಧಾನವು ಅನಪೇಕ್ಷಿತ ವಾಣಿಜ್ಯ ಸಂದೇಶಗಳು ಅಥವಾ ಕರೆಗಳನ್ನ ಒಳಗೊಂಡಿರುತ್ತೆ. ಅಲ್ಲದೆ, ಟೆಲಿಕಾಂ ಸಂಪನ್ಮೂಲಗಳನ್ನ ಹಣಕಾಸಿಗಾಗಿ ಮತ್ತು ಸಾಮಾನ್ಯ ಜನರಿಗೆ ವಂಚಿಸಲು ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಈ ವಿಷಯದಲ್ಲಿ ರೂಪಿಸಲಾದ ನಿಯಮಗಳು ಮತ್ತು ಕಾರ್ಯವಿಧಾನಗಳ ಅನುಸರಣೆಯಲ್ಲಿ ಉಲ್ಲಂಘನೆಯಾದ್ರೆ ಟೆಲಿ ಮಾರ್ಕೆಟರ್ ಗಳ ವಿರುದ್ಧ ದಂಡ ವಿಧಿಸಿ ಎಂದು ಸಚಿವರು ಆದೇಶಿಸಿದರು.








