ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೊರೊನಾ ವಿರುದ್ಧ ದೀಪ ಹಚ್ಚಿ ಅಂಧಕಾರ ತೊಲಗಿಸಿ ಎಂದು ಕರೆ ನೀಡಿದ್ದರು. ಇದಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಬಡವರು, ಶ್ರೀಮಂತರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ದೀಪ ಬೆಳಗಿಸಿದರು. ಆದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರಧಾನಿ ಕೊಟ್ಟ ಕರೆಗೆ ಅಪಮಾನ ಮಾಡಿದ್ದು, ಸಿಗರೇಟು ಹೊತ್ತಿಸುವ ಮೂಲಕ ವ್ಯಂಗ್ಯ ಮಾಡಿದ್ದಾರೆ.
ದೇಶದ ಸೆಲಿಬ್ರಿಟಿಗಳು ದೀಪ ಬೆಳಗಿಸಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಏತನ್ಮಧ್ಯೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರಧಾನಿಯ ಮೋದಿಯನ್ನೇ ಅಣಕಿಸಿದ್ದಾರೆ. ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ದೀಪ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಗೆ ಇಡೀ ದೇಶವೇ ನಡೆದುಕೊಂಡಿದೆ. ಆದರೆ ರಾಮ್ ಗೋಪಾಲ್ ವರ್ಮಾ ದೀಪ ಹಚ್ಚುವ ಬದಲಿಗೆ ಸಿಗರೇಟು ಹಚ್ಚಿದ್ದಾರೆ. ಆ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ‘ಸಿಗರೇಟ್ ಸೇದಬೇಡಿ ಎಂದು ಸರ್ಕಾರ ನೀಡಿರುವ ಎಚ್ಚರಿಕೆಯನ್ನು ಉಲ್ಲಂಘಿಸುವುದಕ್ಕಿಂತಲೂ ಕೊರೊನಾ ಬಗ್ಗೆ ಇರುವ ಎಚ್ಚರಿಕೆಯನ್ನು ಉಲ್ಲಂಘಿಸುವುದೇ ಹೆಚ್ಚು ಅಪಾಯಕಾರಿ’ ಎಂದು ಬರೆದುಕೊಂಡಿದ್ದಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್ ಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ.








