ಜೀವನವಿಡೀ ಕಷ್ಟ ಪಟ್ಟು ಸಂಪಾದಿಸಿದ ಹಣ ಗೆದ್ದಲಹುಳುಗಳ ಪಾಲಾಯ್ತು ಮನೆಕಟ್ಟುವ ಕನಸು ಭಗ್ನವಾಯ್ತು..!
ಹೈದರಾಬಾದ್: ನಾವು ಸಾಮನ್ಯವಾಗಿ ಹಣವನ್ನ ಕೂಡಿಡೋದಕ್ಕೆ ಬ್ಯಾಂಕ್ ಖಾತೆಗಳು, ಅವಶ್ಯ ಬಿದ್ದರೆ ಬ್ಯಾಂಕ್ ನ ಲಾಕರ್ ಗಳು ಇನ್ನೂ ಹಲವು ಸುರಕ್ಷತಾ ಮಾರ್ಗಗಳನ್ನ ಅನುಸರಿಸುತ್ತೇವೆ. ಹಣವನ್ನ ಮನೆಯಲ್ಲಿ ಕೂಡಿಡುವವರು ತುಂಬಾನೆ ಕಡಿಮೆ. ಇದು ಕಳ್ಳತನ ಆಗೋ ಸಾಧ್ಯತೆ ಇರಬಹುದು ಅನ್ನೋ ಯೋಚನೆಯೂ ಇರುತ್ತೆ. ಆದ್ರೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಉದ್ಯಮಿಯೊಬ್ಬರು ತಾನು ಜೀವಮಾನವಿಡಿ ಶ್ರಮಪಟ್ಟು ದುಡಿದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡದೇ ಪೆಟ್ಟಿಗೆಯೊಂದರಲ್ಲಿ ಕೂಡಿ ಇಟ್ಟಿದ್ದರು. ಇತ್ತೀಚೆಗೆ ತಾನು ಸಂಗ್ರಹಿಸಿಟ್ಟ ಹಣವನ್ನು ತೆರೆದು ನೋಡಿದ ಉದ್ಯಮಿಗೆ ಆಘಾತವಾಗಿತ್ತು. ಪೆಟ್ಟಿಗೆ ಸುರಕ್ಷಿತವಾಗಿಲ್ಲದ ಪರಿಣಾಮ 500 ರೂ ಹಾಗೂ 200 ರೂಪಾಯಿ ನೋಟಿನ ಕಂತೆಗಳನ್ನು ಗೆದ್ದಲ ಹುಳ ತಿಂದು ಹಣವನ್ನು ಚೂರುಪಾರು ಮಾಡಿ ಹಾಕಿರುವುದಾಗಿ ವರದಿ ತಿಳಿಸಿದೆ.
ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಖೈದಿಗೆ ಗಲ್ಲು ಶಿಕ್ಷೆ..!
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಂ ನಿವಾಸಿ, ಉದ್ಯಮಿ ಬಿಜ್ಲಿ ಜಾಮಲಯ್ಯ ತಾನು ವರ್ಷಾನುಗಟ್ಟಲೇ ದುಡಿದು ಕೂಡಿಟ್ಟ ಹಣ ಗೆದ್ದಲು ತಿಂದು ಹಾಳು ಮಾಡಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು ಎಂದು ವರದಿ ವಿವರಿಸಿದೆ. ಜಾಮಲಯ್ಯ ಅವರು ಹಂದಿ ಮಾರಾಟ ವ್ಯಾಪಾರ ನಡೆಸುತ್ತಿದ್ದರು. ದಿನಂಪ್ರತಿ ವಹಿವಾಟಿನ ಹಣವನ್ನು ಅವರು ಬ್ಯಾಂಕ್ ನಲ್ಲಿ ಇಡುವ ಬದಲು ಟ್ರಂಕ್ ನಲ್ಲಿ ಕೂಡಿ ಇಡುತ್ತಿದ್ದರು. ತಾನು ಮನೆ ಕಟ್ಟಬೇಕು ಎಂಬ ಕನಸಿನೊಂದಿಗೆ ಸುಮಾರು ಐದು ಲಕ್ಷ ರೂಪಾಯಿ ಹಣ ಟ್ರಂಕ್ ನಲ್ಲಿ ಇಟ್ಟಿರುವುದಾಗಿ ವರದಿ ತಿಳಿಸಿದೆ.
15 ದಿನದಲ್ಲೇ ಗಂಡನ ಬಿಟ್ಟು ಪ್ರಿಯಕರನ ಮದುವೆಯಾದಳು : ಆಕೆಯ ಮನೆಯವರು ಮಾಡಿದ್ದು ಘೋರ ಕೃತ್ಯ..!
ಸಣ್ಣ ಉದ್ಯಮಿ ಜಾಮಲಯ್ಯ ಬೇರೆ ದಾರಿ ಕಾಣದೆ ಚೂರು, ಚೂರಾದ ಹಣವನ್ನು ಸ್ಥಳೀಯ ಮಕ್ಕಳಿಗೆ ವಿತರಿಸಿದ್ದರು, ಮಕ್ಕಳು ಅರ್ಧಂಬರ್ಧ ಹರಿದ ನೋಟನೊಂದಿಗೆ ರಸ್ತೆಯಲ್ಲಿ ಆಟವಾಡುತ್ತಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಹಣದೊಂದಿಗೆ ಆಟವಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತನಿಖೆ ನಡೆಸಲು ಹೋದಾಗ ಉದ್ಯಮಿ ಜಾಮಲಯ್ಯ ಅವರ ಈ ವಿಷಯ ಗೊತ್ತಾಗಿದೆ.