ಟೆಸ್ಟ್ ಕ್ರಿಕೆಟ್ ಗೆ ಫಾಫ್ ಡು ಪ್ಲೆಸಿಸ್ ಗುಡ್ ಬೈ
ಹೈದರಾಬಾದ್ : ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಗುಡ್ ಬೈ ಹೇಳಿದ್ದಾರೆ. ಈ ಕುರಿತು ಅವರೇ ಇನ್ ಸ್ಟಾ ಗ್ರಾಮ್ ನಲ್ಲಿ ಮಾಹಿತಿ ನೀಡಿದ್ದಾರೆ.
ವರ್ಷ ಭಾತರದಲ್ಲಿ ಮತ್ತು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎರಡು ವಿಶ್ವಕಪ್ ಗಳನ್ನು ಗಮನದಲ್ಲಿಟ್ಟುಕೊಂಡು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದೇನೆ.
ಟಿ- 20 ಫಾಮ್ರ್ಯಾಟ್‍ನಲ್ಲಿ ಹೆಚ್ಚು ಗಮನಹರಿಸಲು ಬಯಸುತ್ತೇನೆ, ಹಾಗೆಯೇ ಪ್ರಮುಖ ಐಸಿಸಿ ಈವೆಂಟ್‍ಗಳಿಗೆ ಉತ್ತಮವಾಗಿ ತಯಾರಾಗಲು ಏಕದಿನ ಮತ್ತು ಟಿ-20 ಸ್ವರೂಪದಲ್ಲಿ ಆಡಲು ಬಯಸುತ್ತೇನೆ ಎಂದು ತಮ್ಮ ಪೋಸ್ಟ್‍ನಲ್ಲಿ ಫಾಫ್ ಡು ಪ್ಲೆಸಿಸ್ ಬರೆದುಕೊಂಡಿದ್ದಾರೆ.
2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಫಾಫ್ ಡು ಪ್ಲೆಸಿಸ್ ಸೌತ್ ಆಫ್ರಿಕಾ ಪರ 69 ಟೆಸ್ಟ್ ಪಂದ್ಯವಾಡಿದ್ದು, 4,163 ರನ್ ಗಳಿಸಿದ್ದಾರೆ.
ಅದರಲ್ಲಿ 10 ಶತಕ ಹಾಗೂ 21 ಅರ್ಧಶತಕಗಳಿವೆ. ರಾವಲ್ಪಿಂಡಿಯಲ್ಲಿ ಫೆಬ್ರವರಿ 4, 2021ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಅವರ ಕೊನೆಯ ಪಂದ್ಯವಾಗಿದೆ.
ಬಲಗೈ ಆಟಗಾರ ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ 10, 23, 17 ಮತ್ತು 5 ರನ್ ಸ್ಕೋರ್‍ಗಳನ್ನು ದಾಖಲಿಸಿದ್ದಾರೆ.
2020 ರ ಡಿಸೆಂಬರ್‍ನಲ್ಲಿ ಸೆಂಚುರಿಯನ್‍ನಲ್ಲಿ ಶ್ರೀಲಂಕಾ ವಿರುದ್ಧ 199 ರನ್ ಗಳಿಸಿದ್ದು ಅವರ ಟೆಸ್ಟ್ ಕ್ರಿಕೆಟ್ ನ ಅತ್ಯಧಿಕ ಸ್ಕೋರ್ ಆಗಿದೆ.
ಹಾಗೇಯೇ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕನಾಗಿ 36 ಪಂದ್ಯಗಳನ್ನ ಮುನ್ನೆಡೆಸಿದ್ದು, ಅದರಲ್ಲಿ 18 ಪಂದ್ಯಗಳಲ್ಲಿ ತಂಡ ಜಯ ಸಾಧಿಸಿದೆ.









