ಸತತ 10ನೇ ದಿನವೂ ನಿಲ್ಲದ ತೈಲ ಬೆಲೆಗಳ ಓಟ : ನಮೋ ಸಮರ್ಥನೆ
ನವದೆಹಲಿ : ದೇಶದಲ್ಲಿ ತೈಲ ಬೆಲೆಗಳ ಓಟ ಮುಂದುವರಿದಿದೆ. ಸತತ 10ನೇ ದಿನವೂ ಕೂಡ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಗುರುವಾರ ಪೆಟ್ರೋಲ್ ದರ ಲೀಟರ್ ಗೆ 34 ಪೈಸೆ, ಡೀಸೆಲ್ ದರ ಲೀಟರ್ ಗೆ 32 ಪೈಸೆಯಷ್ಟು ಏರಿಕೆಯಾಗಿದೆ.
ಈ ಏರಿಕೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 89 ರೂಪಾಯಿ 88 ಪೈಸೆಯಷ್ಟಿದೆ. ಡೀಸೆಲ್ ದರ 80 ರೂಪಾಯಿ 27 ಪೈಸೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 92 ರೂಪಾಯಿ 54 ಪೈಸೆಯಷ್ಟಿದ್ದರೆ, ಡೀಸೆಲ್ ಬೆಲೆ 85 ರೂಪಾಯಿ 07 ಪೈಸೆಯಷ್ಟಾಗಿದೆ.
ಏತನ್ಮಧ್ಯೆ, ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 100 ರೂಪಾಯಿ ದಾಟಿದೆ. ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 100.13 ಮತ್ತು 92.13 ರಷ್ಟಿತ್ತು.
ಹೀಗೆ ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವುದು ಜನರ ಕೆಂಗಣ್ಣಿಗೆ ಕಾರಣವಾಗಿದೆ. ಕೊರೊನಾ ಸಂಕಷ್ಟದ ಮಧ್ಯೆ ತೈಲ ಬೆಲೆ ಏರಿಕೆ ಜನರಿಗೆ ಮರ್ಮಾಘಾತವನ್ನು ನೀಡುತ್ತಿದೆ.
ಇನ್ನು ಪ್ರತಿದಿನ ತೈಲ ಬೆಲೆ ಏರಿಕೆ ಆಗುತ್ತಿದ್ದರೂ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಈ ಬಗ್ಗೆ ಮಾತನಾಡಿದ್ದು, ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಹಿಂದಿನ ಸರ್ಕಾರಗಳೆ ಹೊಣೆ ಎಂದು ಜಾರಿಕೊಂಡಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ಇಂಧನ ಆಮದಿನ ಅವಲಂಬನೆ ಕಡಿಮೆ ಮಾಡುವತ್ತ ಗಮನ ಹರಿಸಿದ್ದರೆ, ಈಗ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ ಎಂದು ಪೊಲಿಟಿಕಲ್ ಹೇಳಿಕೆ ನೀಡಿದ್ದಾರೆ.
ಹಿಂದೆ ಸರಿ ಇರಲಿಲ್ಲ, ಈಗ ನೀವಾದ್ರೂ ಸರಿ ಮಾಡಿ
ಹೌದು..! ಪ್ರಧಾನಿ ನರೇಂದ್ರ ಮೋದಿ ತೈಲ ಬೆಲೆ ಏರಿಕೆಗೆ ಈ ಹಿಂದಿನ ಸರ್ಕಾರಗಳೇ ಕಾರಣ ಅಂತ ಹೇಳಿಕೆ ನೀಡಿದ್ದಾರೆ.ಆದ್ರೆ ಈಗ ಅವರು ಅಧಿಕಾರದಲ್ಲಿಲ್ಲ ಅವರು ಸರಿಯಾಗಿ ಆಡಳಿತ ಮಾಡಲಿಲ್ಲ ಅಂತಾನೇ ಅಲ್ವಾ ಈಗ ನಿಮ್ಮನ್ನ ಅಧಿಕಾರದಲ್ಲಿ ಕೂರಿಸಿರೋದು, ಈಗ ನೀವಾದ್ರೂ ಕಡಿಮೆ ಮಾಡಿ ಅಂತಾ ಜನರು ಹೇಳುತ್ತಿದ್ದಾರೆ.