ಪಿಎಫ್ ಐ, ಎಸ್ ಡಿಪಿಐ ಬಿಜೆಪಿಯ ‘ಬಿ’ ಟೀಂ : ಸಿದ್ದರಾಮಯ್ಯ
ಮಂಗಳೂರು : ಪಿಎಫ್ ಐ, ಎಸ್ ಡಿಪಿಐ ಬಿಜೆಪಿಯ ‘ಬಿ’ ಟೀಂ. ಅದನ್ನ ನಿಷೇಧ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ ಐ ಬಿಜೆಪಿಯ ಬಿ ಟೀ ಆಗಿದೆ.
ಅದು ರ್ಯಾಲಿ ಮಾಡಲು ಬಿಜೆಪಿಯವರು ಅನುಮತಿ ಕೊಟ್ಟಿದ್ದಾರೆ. ಪಿಎಫ್ ಐ, ಎಸ್ ಡಿಪಿಐ ರದ್ದು ಮಾಡಲು ಸಾಕಷ್ಟು ಸಾಕ್ಷ್ಯಗಳಿವೆ.
ಕೂಡಲೇ ಪಿಎಫ್ ಐ,ಎಸ್ ಡಿಪಿಐ ರದ್ದು ಮಾಡಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇನ್ನು ಪಿಎಫ್ ಐ ಮತ್ತು ಎಸ್ ಡಿಪಿಐ ರದ್ದು ಮಾಡಲು ಸಾಕಷ್ಟು ಸಾಕ್ಷ್ಯಗಳಿವೆ. ಅವುಗಳನ್ನ ಕೇಂದ್ರಕ್ಕೆ ಕಳುಹಿಸಿ ನಿಷೇಧ ಮಾಡಲಿ, ಎಸ್ ಡಿಪಿಐಯನ್ನು ಬೆಳೆಸುತ್ತಿರುವುದೇ ಬಿಜೆಪಿ.
ಅವರಿಗೆ ಅದನ್ನು ನಿಷೇಧ ಮಾಡಲು ತೊಂದರೆ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದೇ ವೇಳೆ ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಮಾತನಾಡಿ, ನಾರಾಯಣಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಇರಬಾರದು.
ಅವರ ಅಧಿಕಾರಾವಧಿಯಲ್ಲಿ ಚುನಾವಣೆ ನಡೆಯಬಾರದು ಎಂದು ಸರ್ಕಾರ ಕಿತ್ತು ಹಾಕುತ್ತಿದ್ದಾರೆ.
ಇದು ಅಸಾಂವಿಧಾನಿಕವಾಗಿದ್ದು, ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.