ಕೊರೊನಾ ಎಫೆಕ್ಟ್ : ಮಾರ್ಚ್ 7ರವರೆಗೆ ಶಾಲೆ-ಕಾಲೇಜು ಬಂದ್
ಮಹಾರಾಷ್ಟ್ರ : ಕಳೆದ ಕೆಲ ತಿಂಗಳಿನಿಂದ ತೆಪ್ಪಗಾಗಿದ್ದ ಕೊರೊನಾ ಮತ್ತೆ I AM Back ಅಂತಾ ಆರ್ಭಟಿಸಲು ಶುರು ಮಾಡಿದೆ.
ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಸ್ಥಳೀಯ ಆಡಳಿತ ಶಾಲಾ-ಕಾಲೇಜುಗಳನ್ನು ಮಾ.7 ರವರೆಗೆ ಬಂದ್ ಮಾಡಲು ತೀರ್ಮಾನ ಕೈಗೊಂಡಿದೆ.
ಇದಲ್ಲದೆ ಮಾರ್ಚ್ 07ರವರೆಗೂ ಮಾರುಕಟ್ಟೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಹಾಗೆ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು 50 ಪ್ರತಿಶತ ಸಾಮಥ್ರ್ಯದಲ್ಲಿ ಮಾತ್ರ ನಡೆಸುವಂತೆ ಸೂಚಿಸಲಾಗಿದೆ.
ಇನ್ನು ರಾತ್ರಿ ವೇಳೆ 9 ಗಂಟೆಯ ನಂತರ ಹೋಟೆಲ್‍ಗಳನ್ನು ಮುಚ್ಚುವಂತೆ ಕಟ್ಟಾಜ್ಞೆ ಮಾಡಲಾಗಿದೆ.
ಅಲ್ಲದೆ ಈ ತಿಂಗಳ25 ರಿಂದ ಮಾರ್ಚ್ 7 ರವರೆಗೆ ಮದುವೆ ಮಂಟಪಗಳನ್ನು ಮುಚ್ಚುವಂತೆ ಪಾಲಿಕೆ ಆದೇಶ ಹೊರಡಿಸಿದ್ದು, ಮನೆಯಲ್ಲೇ ಮದುವೆಯಾಗಲು ಅನುಮತಿ ನೀಡಿದೆ.