ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ Saakshatv cooking recipes Moringa rotti
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು 1 ಕಪ್
ಅನ್ನ 1 ಕಪ್
ಹೆಚ್ಚಿದ ನುಗ್ಗೆ ಸೊಪ್ಪು 1 ಕಪ್
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ 1/2 ಕಪ್
ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 2-3
ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ
Saakshatv cooking recipes Moringa rotti

ಮಾಡುವ ವಿಧಾನ:
ಮಿಕ್ಸಿಯಲ್ಲಿ ಅನ್ನವನ್ನು ರುಬ್ಬಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ.
ಅದಕ್ಕೆ ಅಕ್ಕಿ ಹಿಟ್ಟು, ಹೆಚ್ಚಿದ ನುಗ್ಗೆ ಸೊಪ್ಪು, ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ, ಚೆನ್ನಾಗಿ ನಾದಬೇಕು.
ಚೆನ್ನಾಗಿ ಮಿಕ್ಸ್ ಆದ ಬಳಿಕ ಅದರಿಂದ ಸಣ್ಣ ಉಂಡೆಗಳನ್ನು ಮಾಡಿ.
ಬಳಿಕ ಬಾಳೆ ಎಲೆಗೆ ಎಣ್ಣೆ ಸವರಿ ರೊಟ್ಟಿ ತಟ್ಟಿ.
ಕಾವಲಿಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ. ನಂತರ ತಟ್ಟಿದ ರೊಟ್ಟಿಯನ್ನು ಕಾದ ಕಾವಲಿ ಮೇಲೆ ಹಾಕಿ ಎಣ್ಣೆ ಸವರುತ್ತಾ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ.

ಈಗ ರುಚಿಯಾದ ಬಿಸಿ ಬಿಸಿ ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ ಸವಿಯಲು ರೆಡಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
https://twitter.com/SaakshaTv/status/1364408453410611206?s=19
https://twitter.com/SaakshaTv/status/1364373201908682752?s=19
https://twitter.com/SaakshaTv/status/1363694711228170244?s=19







