ಎಫ್ ಡಿಎ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಕಲು ಆರೋಪ
ವಿಜಯಪುರ : ಇಂದು ನಡೆದ ಎಫ್ ಡಿಎ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಕಲು ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ.
ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಯನ್ನ ಇಂದಿಗೆ ಮುಂದೂಡಲಾಗಿತ್ತು. ಆದ್ರೆ ಇಂದು ನಡೆದ ಪರೀಕ್ಷೆ ವೇಳೆ ನಕಲು ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿ ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದ್ರು.
ಹೌದು..! ವಿಜಯಪುರದ ಎಸ್ ಎಸ್ ಹೈಸ್ಕೂಲ್ ನಲ್ಲಿ ನಡೆದ ಪರೀಕ್ಷೆ ವೇಳೆ ಹೈಸ್ಕೂಲ್ ಸಿಬ್ಬಂದಿಯೊಬ್ಬರು ಅಭ್ಯರ್ಥಿಯೊಬ್ಬರಿಗೆ ಕೀ ಉತ್ತರ ಹೇಳಿಕೊಟ್ಟಿದ್ದಾರೆ ಎನ್ನಲಾಗಿದೆ.
ಸಿಬ್ಬಂದಿ ಉತ್ತರ ಕೇಳಿಕೊಟ್ಟಿರುವುದನ್ನ ವಿದ್ಯಾರ್ಥಿಗಳು ಪತ್ತೆ ಹಚ್ಚಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಇದರ ವಿರುದ್ಧ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ರು.
ಮೊದಲ ಪರೀಕ್ಷೆ ಮುಗಿಯುವ ಮುನ್ನ ಕೀ ಉತ್ತರ ಪರಿಕ್ಷಾರ್ಥಿಗೆ ತಲುಪಿರುವುದು ಸುದ್ದಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಪರಿಶೀಲನೆ ನಡೆಸಿದರು.
ಇತ್ತ ಕಾಲೇಜು ಸಿಬ್ಬಂದಿಯೊಬ್ಬರನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.










