2023ರ ವೇಳೆಗೆ ಲಾಂಚ್ ಆಗಲಿದೆ ಫೋಲ್ಡೇಬಲ್ ಐಫೋನ್..!
ಇತ್ತೀಚೆಗೆ ಫೋಲ್ಡಿಂಗ್ ಸ್ಮಾರ್ಟ್ ಫೋನ್ಸ್ ಗಳು ಸಾಕಷ್ಟು ಸುದ್ದಿಯಲ್ಲಿವೆ. ಸ್ಯಾಮ್ ಸಂಗ್, ಹವಾಯಿ, ಮೋಟೋರೋಲಾ ಕಂಪನಿಗಳು ಈಗಾಗಲೇ ಫೋಲ್ಡೇಬಲ್ ( ಮಡಿಚಬಲ್ಲ) ಫೋನ್ ಗಳನ್ನ ಮಾರ್ಕೆಟ್ ನಲ್ಲಿ ಲಾಂಚ್ ಮಾಡಿ ಸ್ಮಾರ್ಟ್ ಫೋನ್ ಪ್ರಿಯರಿಗೆ ಗಿಫ್ಟ್ ನೀಡಿವೆ. ಆದ್ರೆ ಈ ಮೊಬೈಲ್ ಗಳು ಸಿಕ್ಕಾಪಟ್ಟೆ ದುಬಾರಿಯೂ ಹೌದು. ಅದರಂತೆಯೇ ಇದೀಗ ಐಫೋನ್ ನಲ್ಲೂ ಫೋಲ್ಡೇಬಲ್ ಮಾಡೆಲ್ ಲಾಂಚ್ ಗಾಗಿ ಬೇಡಿಕೆಯಿದೆ.
ಮುದ್ದು ಮಗನನ್ನ ಕೊಲ್ಲುವ ಮನಸ್ಸು ಹೇಗೆ ಬಂತು… ಈ ಪಾಪಿ ತಾಯಿಗೆ..!
ಹೌದು ಫೋಲ್ಡೇಬಲ್ ಐಫೋನ್ ( Foldable Iphone) ಲಾಂಚಿಂಗ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ಐಫೋನ್ ಪ್ರಿಯರು ಹೊಸ ವಿನ್ಯಾಸದ ಮಾಡೆಲ್ ಲಾಂಚ್ ಆಗುವುದನ್ನ ಕಾಯುತ್ತಿದ್ದಾರೆ. ಟಾಪ್ ಆಪಲ್ ಅನಾಲಿಸ್ಟ್ ಮಿಂಗ್ ಚಿ ಕುವಾ ಅವರು ಹೊಸ ಮಾಡೆಲ್ ಲಾಂಚ್ ಬಗ್ಗೆ ಮಾಹಿತಿ ನೀಡಿದ್ದಾರೆ. 2023ರ ವೇಳೆಗೆ ಈ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಪ್ಲಾನ್ ಮಾಡಿಕೊಂಡಿರೋದಾಗಿ ತಿಳಿಸಿದ್ದಾರೆ.
ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ‘ಜೈಷ್ ಉಲ್ ಹಿಂದ್’ ಸಂಘಟನೆ ಕೈವಾಡದ ಸುದ್ದಿ ಸುಳ್ಳು..!
ಹೊಸ ವಿನ್ಯಾಸದ ಫೋಲ್ಡೇಬಲ್ ಐಫೋನ್ ಫೀಚರ್
7.5 – 8 ಇಂಚ್ ಸ್ಕ್ರೀನ್ ಇರಬಹುದು ಎಂದು ಹೇಳಲಾಗಿದೆ.
ಇನ್ನೂ ಮೂಲಗಳ ಪ್ರಕಾರ ಗ್ಯಾಲಕ್ಸಿ Z ಫೋಲ್ಡ್ ಮಾಡೆಲ್ ಅನ್ನೇ ಈ ಹೊಸ ವಿನ್ಯಾಸದ ಐಫೋನ್ ಹೋಲಲಿದೆ ಎನ್ನಲಾಗಿದೆ. ಆದ್ರೆ ಇನ್ನೂ ಈ ಬಗ್ಗೆ ಅಧಿಕೃತವಾಗಿಲ್ಲ. ಮಿಂಗ್ ಚಿ ಕುವಾ ಅವರು ಹೇಳುವ ಪ್ರಕಾರ ಇನ್ನೂವರೆಗೂ ನಿರ್ದಿಷ್ಟವಾಗಿ ಯಾವುದೇ ವಿನ್ಯಾಸವನ್ನ ಅಂತಿಮಗೊಳಿಸಲಾಗಿಲ್ಲ. ಇನ್ನೂ ವದಂತಿಗಳ ಪ್ರಕಾರ ಈ ಹೊಸ ವಿನ್ಯಾಸ ಅಭಿವೃದ್ಧಿ ಪಡಿಸಲು ಆಪಲ್ ಕಂಪನಿ ಸ್ಯಾಮ್ ಸಂಗ್ ಹಾಗೂ LG ಕಂಪನಿಯೊಂದಿಗೆ ಕೆಲಸ ಮಾಡ್ತಿದೆ ಎಂದು ಹೇಳಲಾಗಿದೆ.








