ಎಳನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು Saakshatv healthtips tender coconut
ಎಳನೀರು ನಂಬಲಾಗದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೃದಯದ ಆರೋಗ್ಯವನ್ನು ಹೆಚ್ಚಿಸುವುದರಿಂದ ಹಿಡಿದು ಮೊಡವೆಗಳಿಗೆ ಚಿಕಿತ್ಸೆ ನೀಡುವವರೆಗೆ, ಎಳನೀರಿನ ಕೊಡುಗೆ ಸಾಕಷ್ಟಿದೆ.
ಎಳನೀರು ಪ್ರಮುಖ ಸಕ್ಕರೆಗಳು, ಜೀವಸತ್ವಗಳು, ಖನಿಜಗಳು, ಅಮೈನೋ ಆಮ್ಲಗಳು ಮತ್ತು ಫೈಟೊಹಾರ್ಮೋನುಗಳಿಂದ ಕೂಡಿದೆ. ಇದು ನಿಮ್ಮ ದೇಹದ ಉತ್ಕರ್ಷಣ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಅಜೈವಿಕ ಅಯಾನುಗಳನ್ನು ಸಹ ಒಳಗೊಂಡಿದೆ. Saakshatv healthtips tender coconut

ಎಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತದೆ. ತೆಂಗಿನ ಮಾಂಸ (ಕೊಪ್ರಾ ಎಂದೂ ಕರೆಯುತ್ತಾರೆ) ಕೂಡ ಉರಿಯೂತದ ವಿರುದ್ಧ ಹೋರಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಎಳನೀರು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಯನ್ನು ಹೊಂದಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು : ಎಳನೀರು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಗ್ರಹಿಸುತ್ತದೆ ಮತ್ತು ಒಳ್ಳೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಮಧುಮೇಹಿಗಳಿಗೆ ಪರಿಣಾಮಕಾರಿ: ಎಳನೀರಿನಲ್ಲಿ ಮೆಗ್ನೇಶಿಯಂ ಪ್ರಮಾಣ ಹೆಚ್ಚಿದ್ದು, ಇದು ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಅಧಿಕ ರಕ್ತದೊತ್ತಡ ನಿವಾರಿಸುತ್ತದೆ: ಎಳನೀರಿನಲ್ಲಿ ಸಾಕಷ್ಟು ಪೊಟ್ಯಾಶಿಯಂ ಅಂಶವಿದ್ದು, ಇದು ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ ರಕ್ತಹೆಪ್ಪುಗಟ್ಟುವುದನ್ನು ಕೂಡ ತಪ್ಪಿಸುತ್ತದೆ.
ಮೂತ್ರ ಪಿಂಡ ಅಥವಾ ಕಿಡ್ನಿ ಸ್ಟೋನ್ ಸಮಸ್ಯೆ ತಡೆಗಟ್ಟಲು ನೆರವಾಗುತ್ತದೆ : ಎಳನೀರು ಮೂತ್ರ ಕ್ರಿಯೆಯನ್ನು ಸರಾಗಗೊಳಿಸಿ, ಸಣ್ಣ ಸಣ್ಣ ಹರಳುಗಳನ್ನು ದೇಹದಿಂದ ಹೊರ ಹಾಕಲು ನೆರವಾಗುತ್ತದೆ.

ದೇಹಾಯಾಸ ನಿವಾರಿಸಿ ಹೊಸ ಚೈತನ್ಯ ನೀಡುತ್ತದೆ : ಎಳನೀರಿನಲ್ಲಿ ಗ್ಲುಕೋಸ್ ಪ್ರಮಾಣ ಹೇರಳವಾಗಿದ್ದು, ಇದು ದೇಹಾಯಾಸವನ್ನು ನಿವಾರಿಸುತ್ತದೆ. ಜೊತೆಗೆ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ. ಡಿಹೈಡ್ರೇಶನ್ ಗೆ ಕೂಡ ಎಳನೀರು ಪರಿಣಾಮಕಾರಿ.
ಬೊಜ್ಜನ್ನು ಕಡಿಮೆಗೊಳಿಸುವ ನೆರವಾಗುತ್ತದೆ:
ಎಳನೀರಿನಲ್ಲಿ ಫೈಬರ್ ಅಂಶವಿದ್ದು, ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ಫೈಬರ್ ಜೀರ್ಣ ಕ್ರಿಯೆಯನ್ನು ನಿಧಾನಿಸಿ, ಹಸಿವು ಕಡಿಮೆಯಾಗುವಂತೆ ಮಾಡುತ್ತದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
https://twitter.com/SaakshaTv/status/1365133628305534976?s=19
https://twitter.com/SaakshaTv/status/1365098000989708293?s=19
https://twitter.com/SaakshaTv/status/1365144670276382720?s=19








