ಪುಟ್ಟ ಕಂದಮ್ಮನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೊಲೀಸ್
ಚಂಡೀಗಢ : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಾಲ್ಲ ಒಂದು ಫೋಟೊ, ವಿಡಿಯೋ ವೈರಲ್ ಆಗುತ್ತಲೇ ಇರುತ್ತೆ.
ಅದರಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್ ಪುಟ್ಟ ಕಂದಮ್ಮನನ್ನು ಭುಜದ ಮೇಲೆ ಮಲಗಿಸಿಕೊಂಡು ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿರುವ ವೀಡಿಯೋ ವೈರಲ್ ಆಗುವುದರ ಜೊತೆಗೆ ಚರ್ಚೆ ಆಗುತ್ತಿದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಉರಿಯುವ ಬಿಸಿಲಿನಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತಮ್ಮ ಕಂದಮ್ಮನನ್ನ ಹೆಗಲ ಮೇಲೆ ಮಲಗಿಸಿಕೊಂಡು ಸಂಚಾಯ ನಿಯಂತ್ರಣ ಮಾಡುತ್ತಿದ್ದಾರೆ.
#Chandigarh : Traffic Constable Priyanka is doing her duty, with baby in her arms. 🙏👍@D_Roopa_IPS @PriyankaJShukla @sonalgoelias @ipsvijrk @ipskabra @ankidurg @ParveenKaswan @SwatiLakra_IPS @IMinakshiJoshi pic.twitter.com/8JUqf8eniV
— Vijay Kedia (@TheVijayKedia) March 6, 2021
ಈ ಎಲ್ಲ ದೃಶ್ಯಗಳನ್ನ ಅಲ್ಲೆ ಸುತ್ತ ಮುತ್ತಲಿನ ಸ್ಥಳೀಯರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಹಿಳಾ ಟ್ರಾಫಿಕ್ ಪೊಲೀಸ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಮೇಲಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.