ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಪಟ್ಟಿ
ಬೆಂಗಳೂರು : 14ನೇ ಆವೃತ್ತಿಯ ಐಪಿಎಲ್ ಧಮಾಕಾಗೆ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಏಪ್ರಿಲ್ 9 ರಿಂದ ಮೇ 30 ರವರೆಗೆ ಈ ಬಾರಿಯ ಟೂರ್ನಿ ನಡೆಯಲಿದೆ.
ಈ ಬಾರಿ ಬೆಂಗಳೂರು, ದೆಹಲಿ, ಕೊಲ್ಕತ್ತಾ, ಅಹಮದಾಬಾದ್, ಚೆನ್ನೈ, ಮುಂಬೈ ನಲ್ಲಿ ಈ ಬಾರಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಹೀಗಾಗಿ ಒಂದಿಷ್ಟು ಬದಲಾವಣೆಗಳನ್ನ ಮಾಡಲಾಗಿದೆ.
ಅದರಲ್ಲಿ ಮುಖ್ಯವಾಗಿ ತವರು ತಂಡಗಳು ಹೊಂಗ್ರೌಂಡ್ ನಲ್ಲಿ ಆಡುವಂತಿಲ್ಲ. ಉದಾಹರಣೆಗೆ ಆರ್ ಸಿಬಿ.. ಅಂದ್ರೆ ಬೆಂಗಳೂರಿನಲ್ಲಿ ನಮ್ಮ ತಂಡ ಪಂದ್ಯಗಳನ್ನ ಆಡಬೇಕಿತ್ತು.
ಆದ್ರೆ ಈ ಬಾರಿ ಬೆಂಗಳೂರಿನಲ್ಲಿ ಆರ್ ಸಿಬಿ ಮ್ಯಾಚ್ ಗಳು ಇರೋದಿಲ್ಲ. ಬದಲಾಗಿ ತಟಸ್ಥ ಸ್ಥಳಗಳಲ್ಲಿ ಮ್ಯಾಚ್ ಗಳು ನಡೆಯಲಿವೆ. ಹಾಗಾದ್ರೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳು ಯಾವುವು..?
ಮೇ 9ರಿಂದ ಬೆಂಗಳೂರಿನಲ್ಲಿ ಐಪಿಎಲ್ ಹಂಗಾಮ
ಹೌದು..! ಈ ಬಾರಿಯ ಐಪಿರಲ್ ಏಪ್ರಿಲ್ 9 ರಂದೇ ಆರಂಭವಾದ್ರೂ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯೋದು ಮೇ 9 ರಂದು. ಅಂದ್ರೆ ಟೂರ್ನಿ ಆರಂಭವಾಗಿ ಬರೋಬ್ಬರಿ 1 ತಿಂಗಳಿಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ.
ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂದ್ಯಗಳು ಯಾವುವು..?
ಮೇ 19ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್
ಮೇ 10ರಂದು ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್
ಮೇ 12ರಂದು ಸಿಎಸ್‍ಕೆ ಮತ್ತು ಕೆಕೆಆರ್
ಮೇ 13ರಂದು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್
ಮೇ 15ರಂದು ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್
ಮೇ 16ರಂದು ಸಿಎಸ್‍ಕೆ ಮತ್ತು ಮುಂಬೈ ಇಂಡಿಯನ್ಸ್
ಮೇ 18ರಂದು ಕೆಕೆಆರ್ ಮತ್ತು ರಾಜಸ್ತಾನ ರಾಯಲ್ಸ್
ಮೇ 19ರಂದು ಸನ್ ರೈಸರ್ಸ್ ಹೈದ್ರಬಾದ್ ಮತ್ತು ಪಂಜಾಬ್ ಕಿಂಗ್ಸ್
ಮೇ 21ರಂದು ಕೆಕೆಆರ್ ಮತ್ತು ಸನ್ ರೈಸರ್ಸ್ ಹೈದ್ರಬಾದ್
ಮೇ 22ರಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್
ಒಟ್ಟು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 10 ಪಂದ್ಯಗಳು ನಡೆಯಲಿವೆ. ಮೇ 9ರಿಂದ ಮೇ 22ರವರೆಗೆ ಆರ್‍ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಇನ್ನುಳಿದ ಆರು ತಂಡಗಳು ಚಿನ್ನಸ್ವಾಮಿ ಮೈದಾನದಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿವೆ.