Karnataka Budget 2021 Live : 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ
ಬೆಂಗಳೂರು : ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರಗಳಲ್ಲಿ ಒಟ್ಟು 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ ಅನುದಾನವನ್ನ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರು 2021 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರಗಳಲ್ಲಿ ಒಟ್ಟು 234 ಕೆರೆ ತುಂಬಿಸುವ ಯೋಜನೆಗೆ 500 ಕೋಟಿ ಅನುದಾನವನ್ನ ಘೋಷಣೆ ಮಾಡಿದ್ದಾರೆ.
58 ಡ್ಯಾಂ ಗಳ ಪುನಶ್ಚೇತನ ಮತ್ತು ಅಭಿವೃದ್ಧಿ, ಎತ್ತಿನ ಹೊಳೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ, ಬೆಂಗಳೂರಿನ ಹೆಸರುಘಟ್ಟದಲ್ಲಿ ಥೀಮ್ ಪಾರ್ಕ್ ನಿರ್ಮಾಣ, ಮಹಾದಾಯಿ ಯೋಜನೆಗೆ 1677 ಕೋಟಿ ರೂ. ಅನುದಾನ, ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರೂಪಾಯಿ, ಜೈನ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ, ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ, ಖಾಸಗಿ ಸಹಭಾಗಿತ್ವದಲ್ಲಿ ಬಳ್ಳಾರಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ, ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ, ಪ್ರತಿ ಜಿಲ್ಲೆಗೆ ಒಂದು ಗೋ ಶಾಲೆ, ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ, ಚಾಮರಾಜನಗರದಲ್ಲಿ ಅರಿಶಿಣ ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.









