ತಂದೆ – ತಾತನನ್ನು ಬರ್ಬರವಾಗಿ ಕೊಲೆ ಮಾಡಿದ ತಾನೂ ಆತ್ಮಹತ್ಯೆ ಮಾಡಿಕೊಂಡ..!
ಮುಂಬೈ: 20 ವರ್ಷದ ಯುವಕನೊಬ್ಬ ತನ್ನ ತಂದೆ ಹಾಗೂ ತಾತನನ್ನ ಬರ್ಬರವಾಗಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಾರ್ದುಲ್ ಮಂಗ್ಲೆ ಎಂಬಾತ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಶಾರ್ದೂಲ್ ನ ತಂದೆ-ತಾಯಿ ಬೇರೆ-ಬೇರೆಯಾಗಿದ್ದರು. ಹೀಗಾಗಿ ಈತ ತಂದೆ ಹಾಗೂ ತಾತನ ಜೊತೆ ವಾಸವಿದ್ದ. ಈತನ ತಾಯಿ ಮತ್ತು ತಂಗಿ ಗಟ್ಕೋಪರ್ನಲ್ಲಿ ವಾಸವಿದ್ದರು. ಇತ್ತೀಚೆಗೆ ಯಾವುದೋ ವಿಚಾರಕ್ಕೆ ಕೋಪಗೊಂಡಿರುವ ಯುವಕ ತನ್ನ ತಂದೆ ಹಾಗೂ ತಾತನ ಜೀವ ತೆಗೆದಿದ್ದಾನೆ. ಮನೆಗೆಲಸದವನಾದ ಕಂಬ್ಲೆ ಬಾತ್ ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದ. ಇದಾದ ಬಳಿಕ ಅಪಾರ್ಟ್ಮೆಂಟ್ ನ 6ನೇ ಮಹಡಿಯಿಂದ ಜಿಗಿದು ಶಾರ್ದುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ . 55 ವರ್ಷದ ತಂದೆ ಹಾಗೂ 85 ವರ್ಷದ ತಾತ ಪ್ರಾಣ ಕಳೆದುಕೊಂಡಿದ್ದಾರೆ.
Karnataka Budget 2021 Live : ಮಲೆನಾಡು ಭಾಗಕ್ಕೆ ಸಿಕ್ಕಿದ್ದೇನು..?
ಶಾರ್ದುಲ್ ನ ಮನೆಕೆಲಸದವನಾದ ಕಂಬ್ಲೆ, ಶಾರ್ದುಲ್ ಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುವಂತೆ ಹೇಳಿ, ಕಾಫಿ ಮಾಡಲು ಅಡುಗೆ ಮನೆಗೆ ಹೋಗಿದ್ದಾನೆ. ಇದು ಶಾರ್ದೂ ಲ್ನನ್ನು ಕೆರಳಿಸಿದೆ. ಆಗ ಆತ ಅಡುಗೆ ಮನೆಗೆ ಹೋಗಿ ಚಾಕುವನ್ನು ತೆಗೆದುಕೊಂಡು ತನ್ನ ತಂದೆ ಮಿಲಿಂದ್ ನ ಗಂಟಲನ್ನು ಸೀಳಿದ್ದಾನೆ. ಹೀಗೆ ಶಾರ್ದೂಲ್ ಹಲವು ಬಾರಿ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾನೆ. ಬಳಿಕ ಹಾಸಿಗೆ ಹಿಡಿದು ಮಲಗಿದ್ದ ತನ್ನ ಅಜ್ಜನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಮುಲುಂದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.








