Karnataka Budget 2021 Live : ರೈಲ್ವೆ ಯೋಜನೆಗಳಿಗೆ 3,991 ಕೋಟಿ
ಬೆಂಗಳೂರು : ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ ರೈಲ್ವೆ ಯೋಜನೆಗಳಿಗೆ 3,991 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.
ಇದಲ್ಲದೆ ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕಾಗಿ 2,260 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ ರೂ., ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ. ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ. ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಹೊಸದಾಗಿ 52 ಬಸ್ ಸ್ಟ್ಯಾಂಡ್ಗಳನ್ನು ಸ್ಥಾಪಿಸುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ಉಪನಗರ ರೈಲು ಯೋಜನೆಗೆ ಸಾವಿರಾರು ಕೋಟಿ ರೂ. ಮೀಸಲಿಡಲಾಗಿದೆ.
ಹೊಸ ಹೈಬ್ರಿಡ್ ಬೀಜ ನೀತಿ ಜಾರಿಗೆ ಕ್ರಮ, ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ರೂ, ಪ್ರವಾಸೋದ್ಯಮ ಇಲಾಖೆಗೆ 500 ಕೋಟಿ ಅನುದಾನ ನೀಡಿದ್ದಾರೆ.










