ಇಸ್ಲಾಂ ಧರ್ಮ ನಂಬದ ಕಾರಣ ಮದರ್ ತೆರೇಸಾ ನರಕಕ್ಕೆ ಹೋಗುತ್ತಾರೆ – ಝಾಕೀರ್ ನಾಯ್ಕ್ ವಿವಾದಾತ್ಮಕ ಹೇಳಿಕೆ
ಹೊಸದಿಲ್ಲಿ, ಮಾರ್ಚ್10: ಮಾನವತಾವಾದಿ ಮದರ್ ತೆರೇಸಾ ಅವರು ಮುಸ್ಲಿಮೇತರರಾಗಿದ್ದರಿಂದ ಜಹ್ನಮ್ (ನರಕ) ಗೆ ಹೋಗುತ್ತಾರೆ ಎಂದು ವಿವಾದಿತ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ ಹೇಳಿದ್ದಾರೆ.
ಮದರ್ ತೆರೇಸಾ ಅವರಂತಹ ಮಾನವತಾವಾದಿ ಮತ್ತು ಒಳ್ಳೆಯವರು ಜನ್ನತ್ ಗೆ ಹೋಗುತ್ತಾರೆಯೇ ಎಂದು ಪ್ರಶ್ನಿಸಿದಾಗ, ಸೂರಾ ಅಲ್-ಅಸ್ಸಾದ್ ಪ್ರಕಾರ, ಜನ್ನತ್ (ಸ್ವರ್ಗ) ಗೆ ಹೋಗಲು ನಾಲ್ಕು ಮಾರ್ಗಗಳಿವೆ ಎಂದು ಝಾಕೀರ್ ನಾಯ್ಕ್ ಹೇಳಿದರು.
ಝಾಕೀರ್ ನಾಯ್ಕ್ ‘ಸ್ವರ್ಗದ ನಾಲ್ಕು ಮಾರ್ಗಗಳನ್ನು’ 10 ನೇ ತರಗತಿಯಲ್ಲಿ ಕಲಿಸುವ 6 ವಿಷಯಗಳಿಗೆ ಹೋಲಿಸಿದ್ದಾರೆ. 5 ವಿಷಯಗಳಲ್ಲಿ ಯಾರಾದರೂ 99 ಅಂಕಗಳನ್ನು ಗಳಿಸಿ, ಒಂದು ವಿಷಯದಲ್ಲಿ ಕೇವಲ 10 ಅಂಕಗಳನ್ನು ಗಳಿಸಿದ್ದರೂ ಸಹ, ವಿದ್ಯಾರ್ಥಿ ವಿಫಲರಾಗಿದ್ದಾರೆ ಎಂದು ಅರ್ಥ ಎಂದು ಝಾಕೀರ್ ನಾಯ್ಕ್ ಒತ್ತಿ ಹೇಳಿದರು. ಎಲ್ಲಾ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಸ್ವರ್ಗವನ್ನು ಸಾಧಿಸಬಹುದು ಎಂದು ಝಾಕೀರ್ ನಾಯ್ಕ್ ಹೇಳಿದ್ದಾರೆ.
ಮದರ್ ತೆರೇಸಾ ನೀತಿವಂತರು ಎಂದು ಭಾವಿಸೋಣ. ಇಸ್ಲಾಂನಲ್ಲಿ, ನೀತಿವಂತರು ಬಹಳಷ್ಟು ವಿಷಯಗಳನ್ನು ಒಳಗೊಂಡಿರುತ್ತಾರೆ. ಅದರಲ್ಲಿ ಮದರ್ ತೆರೇಸಾ ಇರಲಿಲ್ಲ ಎಂದು ನನಗೆ ಖಾತ್ರಿಯಿದೆ. ಇಮಾನ್ (ಇಸ್ಲಾಂ ಧರ್ಮದಲ್ಲಿ ನಂಬಿಕೆ) ಬಗ್ಗೆ ಏನು? ಅವರು ಇಸ್ಲಾಂ ಧರ್ಮಕ್ಕಿಂತ ಬೇರೆ ಯಾವುದೇ ಧರ್ಮವನ್ನು ಅನುಸರಿಸಿದರೆ ಇದನ್ನು ನಿಷೇಧಿಸಲಾಗಿದೆ. ಇಸ್ಲಾಂ ಧರ್ಮದ ಪ್ರಕಾರ ಬೇರೆ ಯಾವುದೇ ಧರ್ಮವನ್ನು ಅನುಸರಿಸುವುದು ಅಪರಾಧ ಎಂದು ಝಾಕೀರ್ ಹೇಳಿದ್ದಾರೆ.
ಮದರ್ ತೆರೇಸಾ ಯೇಸುಕ್ರಿಸ್ತನನ್ನು ದೇವರು ಎಂದು ಪರಿಗಣಿಸಿ ಯೇಸುವನ್ನು ‘ಅಲ್ಲಾಹ್’ಗೆ ಸಮನಾಗಿ ಇಟ್ಟಿದ್ದಾರೆ ಎಂದು ವಿವಾದಿತ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ ತೀರ್ಮಾನಿಸಿದ್ದಾರೆ. ಆದ್ದರಿಂದ, ಕುರಾನ್ ಪ್ರಕಾರ, ಯಾರಾದರೂ ಶಿರ್ಕ್ (ಇಸ್ಲಾಂ ಧರ್ಮ ಹೊರತುಪಡಿಸಿ ಬೇರೆ ಯಾವುದೇ ಧರ್ಮವನ್ನು ಅನುಸರಿಸುವುದು) ಮಾಡಿದರೆ, ಅದು ಮದರ್ ತೆರೇಸಾ ಅಥವಾ ಬೇರೊಬ್ಬರು ಆಗಿರಲಿ, ಅವರು ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಅವರು ಹೇಳಿದರು.
ಎಳನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು https://t.co/zoAgRXXag9
— Saaksha TV (@SaakshaTv) March 5, 2021
ಎಲ್‌ಐಸಿ ಸ್ಪೆಷಲ್ ಯೋಜನೆ – ಪ್ರತಿದಿನ 275 ರೂ ಉಳಿಸಿ, 48000 ರೂ ಪಿಂಚಣಿ ಪಡೆಯಿರಿ https://t.co/qt2qWQXSwT
— Saaksha TV (@SaakshaTv) March 3, 2021
ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್ https://t.co/9xFWsJ68eV
— Saaksha TV (@SaakshaTv) March 3, 2021