ಮಹಿಳೆಯ ಮೇಲೆ ಹಲ್ಲೆ ನಡೆಸಿದ ZOMATO ಡಿಲೆವರಿ ಬಾಯ್..! ಮಹಿಳೆ ಕಣ್ಣೀರು – VIDEO VIRAL
ಬೆಂಗಳೂರು : ಮೇಕಸ್ ಆರ್ಟಿಸ್ಟ್ ಮಹಿಳೆಯೊಬ್ಬರ ಮೇಲೆ ಜೋಮ್ಯಾಟೋ ಡಿಲೆವರಿ ಬಾಯ್ ಹಲ್ಲೆ ನಡೆಸಿರೋದಾಗಿ, ಹಲ್ಲೆಗೊಳಗಾದ ಮಹಿಳೆ ವಿಡಿಯೋ ಮಾಡಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಮಹಿಳೆ ಗೋಳಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಝೊಮ್ಯಾಟೋ ಕಂಪನಿ ನಿಜಕ್ಕೂ ಸೇಫಾ ಎಂಬ ಪ್ರಶ್ನೆ ಎದ್ದಿದೆ. ಹಲ್ಲೆ ನಡೆಸಿದ ಡಿಲೆವರಿ ಬಾಯ್ ನನ್ನ ಕೆಲಸದಿಂದ ಕಿತ್ತು ಹಾಕಬೇಕೆಂದು ನೆಟ್ಟಿಗರು ಡಿಮ್ಯಾಂಡ್ ಮಾಡ್ತಾಯಿದ್ದು, ಝೊಮ್ಯಾಟೋ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಮಹಿಳೆಯು ತನ್ನ ಇನ್ಸ್ಟಾಗ್ರಾಂನ ಖಾತೆಯಲ್ಲಿ ವಿಡಿಯೋ ಸೇರ್ ಮಾಡಿಕೊಂಡಿದ್ದಾರೆ. ಹಲ್ಲೆ ನಡೆದ ನಂತರ ರಸ್ತ ಸ್ರಾವವಾಗುತ್ತಿರುವುದನ್ನ ಮೊದಲಿಗೆ ವಿಡಿಯೋದಲ್ಲಿ ತೋರಿಸಿದ್ದಾರೆ. ಇದರ ಬಗ್ಗೆ ಹಿತೇಶಾ ವಿವರಣೆ ನೀಡುತ್ತಾ ಹೇಗೆ ನನ್ನ ಮೇಲೆ ಹಲ್ಲೆ ನಡೆದಿದೆ ನೋಡಿ ಎಂದು ಕಣ್ಣೀರಿಟ್ಟಿದ್ದಾರೆ. ನಂತರ ಫಸ್ಟ್ ಎಡ್ ಮಾಡಿಕೊಂಡು ವಿಡಿಯೋದಲ್ಲಿ ಘಟನೆ ಬಗ್ಗೆ ವಿವರಣೆ ನೀಡಿರುವ ಮಹಿಳೆ ಫುಡ್ ಆರ್ಡರ್ ಮಾಡಿದ ನಂತರ ಅದನ್ನ ಡಿಲೆವರಿ ಮಾಡಲು ತಡವಾಗಿದೆ. ಹೀಗಾಗಿ ಈ ಬಗ್ಗೆ ಕಂಪನಿಯ ಕಸ್ಟಮರ್ ಕೇರ್ ಜೊತೆಗೆ ನಾನು ಮಾತನಾಡಿದೆ. ತಡವಾಗಿ ಆರ್ಡರ್ ತಲುಪಿಸುತ್ತಿದ್ದೀರಾ ಹಾಗಾದ್ರೆ ಕಂಪನಿಯೇ ಹೇಳಿರೋ ಹಾಗೆ ಫುಡ್ ಅನ್ನ ಫ್ರೀ ಆಗಿ ಡಿಲೆವರ್ ಮಾಡಿ ಎಂದು ಕೇಳಿಕೊಂಡೆ. ಆದ್ರೆ ಅಷ್ಟರಲ್ಲೇ ಮನೆ ಬಾಗಲಿಗೆ ಬಂದ ಡಿಲೆವರ್ ಬಾಯ್ ಸಿಟ್ಟಿನಿಂದ ಮಾತನಾಡಲು ಆರಂಭಿಸಿದ. ಆದ್ರೆ ನನಗೆ ಆರ್ಡರ್ ಬೇಡ. ತಡವಾಗಿದೆ ಎಂದು ವಾದಿಸಿದೆ. ನನಗೆ ಆರ್ಡರ್ ಬೇಡ ಕ್ಯಾನ್ಸಲ್ ಮಾಡುವುದಾಗಿ ಹೇಳಿದೆ. ಅಷ್ಟಕ್ಕೇ ಸಿಟ್ಟಿಗೆದ್ದ ಆತ ಏಕಾಏಕಿ ನನ್ನ ಮುಖದ ಮೇಲೆ ಗುದ್ದಿ ದಾಳಿ ನಡೆಸಿದ ಎಂದು ಹೇಳುತ್ತಾ ಕಣ್ಣಿರಿಟ್ಟಿದ್ದಾರೆ.
ಇನ್ನೂ ಇವರ ವಿಡಿಯೋಗೆ ಖುದ್ದು ಝೊಮ್ಯಾಟೋ ಕಂಪಿನಿಯೇ ಪ್ರತಿಕ್ರಿಯೆ ನೀಡಿದ್ದು, ನಾವು ನಮ್ಮ ಕಂಪನಿಕಡೆಯಿಂದ ಆದ ತಪ್ಪಿನಿಂದಾಗಿ ನಿಮ್ಮ ಪರ ಕ್ಷಮೆಯಾಚಿಸುತ್ತೇವೆ. ಕಾನೂನಿನ ರೀತಿಯಲ್ಲಿ ಈ ಸಂಬಂಧ ತನಿಖೆಯಾಗುತ್ತೆ. ನಮಗೆ ಗ್ರಾಹಕರ ಸೇಫ್ಟಿ ಪ್ರಮುಖ ಆದ್ಯತೆ ಎಂದು ತಿಳಿಸಿದೆ. ಝೊಮ್ಯಾಟೋ ಕಾಮೆಂಟ್ ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಆರೋಪಿಯನ್ನ ಕೆಲಸದಿಂದ ಕಿತ್ತುಹಾಕುವಂತೆ ಒತ್ತಾಯಿದ್ದಾರೆ.
https://www.instagram.com/tv/CMOJo0XnfET/?utm_source=ig_web_copy_link
ಅಂದ್ಹಾಗೆ ಆರೋಪಿಯನ್ನ ಕಾಮರಾಜ್ ಎಂದು ಗುರುತಿಸಲಾಗಿದೆ. ಈತ ಆಕೆಯ ಮನೆ ಬಾಗಿಲಿಗೆ ಬಂದು. ಮಹಿಳೆಗೆ ಬಾಯಿಗೆ ಬಂದ ಹಾಗೆ ಬಯ್ದು ಕೊನೆಗೆ ಆಕೆ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆಂದು ಮಹಿಳೆ ವಿಡಿಯೋದಲ್ಲಿ ಆರೋಪ ಮಾಡಿದ್ಧಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
60ನೇ ವಯಸ್ಸಿನಲ್ಲಿ 2ನೇ ಮದುವೆ ಹುಚ್ಚು..! ಪಟ್ಟು ಹಿಡಿದು ಹೈ ವೋಲ್ಟೇಜ್ ವಿದ್ಯುತ್ ಕಂಬವೇರಿದ ಅಜ್ಜ : VIDEO VIRAL
RSS ನಾಯಕ ಹಾಗೂ ಬಿಜೆಪಿ ಕೇಂದ್ರ ಸಚಿವರ ಮಗಳು ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ..!