ದೆಹಲಿ ಜನರಿಗಾಗಿ ‘ರಾಮರಾಜ್ಯ’ದ 10 ತತ್ವಗಳ ಪಾಲನೆ ಮಾಡಲಿದ್ದಾರಂತೆ ಕೇಜ್ರಿವಾಲ್..!
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ಜನರಿಗಾಗಿ ಒಳ್ಳೆ ಒಳ್ಳೆಯ ಯೋಜನೆಗಳನ್ನ ತರುತ್ತಿದ್ದು, ದೆಹಲಿಯನ್ನ ಮಾದರಿ ರಾಜ್ಯವನ್ನಾಗಿಸುತ್ತಿದ್ದಾರೆ. ಇದೀಗ ದೆಹಲಿ ಜನತೆಯ ಸೇವೆಗಾಗಿ ತಮ್ಮ ಸರ್ಕಾರ ರಾಮರಾಜ್ಯ ಪರಿಕಲ್ಪನೆಯಿಂದ ಪ್ರಭಾವಿತವಾದ 10 ತತ್ವಗಳನ್ನು ಅನುಸರಿಸುತ್ತಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಹೇಳಿಕೊಂಡಿದ್ದಾರೆ.
ಮಹಿಳೆಯ ಮೇಲೆ ಹಲ್ಲೆ ನಡೆಸಿದ ZOMATO ಡಿಲೆವರಿ ಬಾಯ್..! ಮಹಿಳೆ ಕಣ್ಣೀರು – VIDEO VIRAL
ಹೌದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ದೆಹಲಿಯ ಹಿರಿಯ ನಾಗರಿಕರನ್ನು ಅಲ್ಲಿಗೆ ದರ್ಶನಕ್ಕಾಗಿ ಕಳುಹಿಸುವುದಾಗಿಯೂ ಕೇಜರಿವಾಲ್ ಅವರು ತಿಳಿಸಿದ್ದಾರೆ. ಇದೇ ವೇಳೆ ನಾನು ಶ್ರೀರಾಮ ಮತ್ತು ಹನಮಾನ್ ಭಕ್ತ. ರಾಮರಾಜ್ಯದಿಂದ ಪ್ರಭಾವಿತವಾದ 10 ತತ್ವಗಳನ್ನು ನಾವು ಅನುಸರಿಸುತ್ತಿದ್ದೇವೆ. ಶಿಕ್ಷಣ, ಆಹಾರ, ವಿದ್ಯುತ್, ವೈದ್ಯಕೀಯ ಕಾಳಜಿ, ನೀರು ಪೂರೈಕೆ, ವಸತಿ, ಉದ್ಯೋಗ, ಮಹಿಳಾ ಭದ್ರತೆ, ಹಿರಿಯರನ್ನು ಗೌರವಿಸುವುದು ಈ ತತ್ವಗಳಲ್ಲಿ ಇದ್ದು ಇದರ ಪಾಲನೆ ಮಾಡುವುದೇ ನಮ್ಮ ಸರ್ಕಾರದ ಗುರಿ ಎಂದಿದ್ದಾರೆ.