ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ : ಹೆಚ್ ಡಿ ಕೆ
ಇಂದು ಮಹಾಶಿವರಾತ್ರಿ ಹಿನ್ನೆಲೆ ಮಾಜಿ ಸಿಎಂ ಹೆಡ್ ಡಿ ಕುಮಾರಸ್ವಾಮಿ ಅವರು ಮೈಸೂರಿಗೆ ಭೇಟಿ ನೀಡಿ ನಾಡ ದೇವತೆ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಹಾಗೂ ನಂಜನಗೂಡು ನಂಜುಡೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಷಯಗಳನ್ನ ತಿಳಿಸಿದರು.
ಕುಕ್ಕೆ ಸುಬ್ರಮಣ್ಯದಲ್ಲಿ ಹಿಂದಿನ ಸಂಪ್ರದಾಯದಂತೆ ಮಹಾಶಿವರಾತ್ರಿ ಆಚರಣೆ : ಹೈಕೋರ್ಟ್..!
ಇದೇ ವೇಳೆ ಮತ್ತೊಮ್ಮೆ ರಾಜಕೀಯವಾಗಿ ಮಾತನಾಡಿದ ಹೆ ಚ್ ಡಿಕೆ ಪಕ್ಷದ ಬಾಗಿಲು ತೆರೆದಿದೆ, ಹೋಗೋರು ಹೋಗಬಹು, ಬರೋರು ಬರಬಹುದು. ಪಕ್ಷ ಬಿಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರು ಹೋದರೆ ಹೊಸಬರು ಬರ್ತಾರೆ ಎಂದಿದ್ದಾರೆ.
ಇದೇ ವೇಳೆ ಮಧು ಬಂಗಾರಪ್ಪ ಪಕ್ಷ ತೊರೆಯುವುದು ಹಳೆಯ ವಿಚಾರ. ಅಧಿಕಾರ ಉಂಡು ಬೆನ್ನಿಗೆ ಚೂರಿ ಹಾಕುವುದು ಹೊಸದೇನಲ್ಲ. ಯಾರು ಹೋಗಲಿ ಬಿಡಲಿ ಪಕ್ಷಕ್ಕೇನು ನಷ್ಟವಿಲ್ಲ. ಅವರಿಗೆ ಲಾಭ ಆಗುತ್ತೆ ಎಂದು ಶಿಸ್ತು ಕ್ರಮ ಕೈಗೊಂಡಿಲ್ಲ. ದೇವೆಗೌಡರ ಕುಟುಂಬಕ್ಕೆ ಇದೇನು ಹೊಸದೇನಲ್ಲ. ದೇವೆಗೌಡರು ಯಾರನ್ನ ಬೆಳೆಸಿದ್ದಾರೋ ಅವರೇ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ದೇವೆಗೌಡರು ಯಾರನ್ನೋ ಹೆಚ್ಚಾಗಿ ನಂಬಿದ್ರೋ ಅವರೇ ಜಾಸ್ತಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಹೋಗಬೇಕಾದರೆ ಏನೇನೋ ಒಂದು ಸಬೂಬು ಹೇಳಿಕೊಂಡು ಹೋಗ್ತಾರೆ ಅಷ್ಟೇ. ಕಾರ್ಯಕರ್ತರನ್ನ ಬೆಳೆಸುವ ಶಕ್ತಿ ಜೆಡಿಎಸ್ಗೆ ಇದೆ ಎಂದಿದ್ದಾರೆ.