ರೋಹಿತ್ ಗೆ ರೆಸ್ಟ್… ವಿರಾಟ್ ಸೊನ್ನೆ…ರಾಹುಲ್ 1 ರನ್.. ಧವನ್ 4 ರನ್.. ಮಿಂಚಿನ ಅರ್ಧಶತಕ ದಾಖಲಿಸಿದ ಅಯ್ಯರ್..!
ಶ್ರೇಯಸ್ ಅಯ್ಯರ್ ಅವರ ಸಮಯೋಚಿತ ಆಟದಿಂದ ಟೀಮ್ ಇಂಡಿಯಾ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್ ನಷ್ಟಕ್ಕೆ 124 ರನ್ ದಾಖಲಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಟೀಮ್ ಇಂಡಿಯಾದ ಲೆಕ್ಕಚಾರಗಳು ಆರಂಭದಲ್ಲೇ ಬುಡಮೇಲು ಆಯ್ತು. ರೋಹಿತ್ ಬದಲು ಧವನ್ ಮತ್ತು ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಿದ್ರು. ಆದ್ರೆ ಕೆ.ಎಲ್. ರಾಹುಲ್ ಅವರ ಆರ್ಭಟಕ್ಕೆ ಜೋಫ್ರಾ ಆರ್ಚೆರ್ ಬ್ರೇಕ್ ಹಾಕಿದ್ರು. ರಾಹುಲ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಬಳಿಕ ವಿರಾಟ್ ಕೊಹ್ಲಿ ಮತ್ತೆ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದ್ರು. ಆದೀಲ್ ರಶೀದ್ ಅವರ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ರಿಸ್ ಜೋರ್ಡಾನ್‍ಗೆ ಕ್ಯಾಚ್ ನೀಡಿದ್ರು.
ನಂತರ ಧವನ್ ಜೊತೆ ರಿಷಬ್ ಪಂತ್ ತಂಡದ ರನ್ ಗತಿಯನ್ನು ಏರಿಸಲು ಮುಂದಾದ್ರು. ಆರ್ಚೆರ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಸಿಕ್ಸ್ ಹಾಗೂ ಮರು ಎಸೆತದಲ್ಲೇ ಬೌಂಡರಿ ದಾಖಲಿಸಿದ್ರು.
ಈ ನಡುವೆ ಶಿಖರ್ ಧವನ್ 12 ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಮಾರ್ಕ್ ವುಡ್ ಗೆ ಕ್ಲೀನ್ ಬೌಲ್ಡಾದ್ರು.
ಇದಾದ ನಂತರ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರು ತಂಡಕ್ಕೆ ಆಧಾರವಾಗಿ ನಿಂತ್ರು. ಅಲ್ಲದೆ ನಾಲ್ಕನೇ ವಿಕೆಟ್ ಗೆ 28 ರನ್ ಕೂಡ ಕಲೆ ಹಾಕಿದ್ರು. ಏತನ್ಮಧ್ಯೆ ತಾಳ್ಮೆ ಕಳೆದುಕೊಂಡ ರಿಷಬ್ ಪಂತತ್ 21 ರನ್ ಗಳಿಸಿ ಪೆವಿಲಿಯನ್‍ಗೆ ಹಿಂತಿರುಗಿದ್ರು.
ಬಳಿಕ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಐದನೇ ವಿಕೆಟ್ ಗೆ 54 ರನ್ ಕಲೆ ಹಾಕಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ರು. ಆದ್ರೆ ಹಾರ್ದಿಕ್ ಪಾಂಡ್ಯ 19 ರನ್ ದಾಖಲಿದಾಗ ಚೋಫ್ರಾ ಆರ್ಚೆರ್ ಗೆ ವಿಕೆಟ್ ಒಪ್ಪಿಸಿದ್ರು. ಹಾಗೇ ಶಾರ್ದೂಲ್ ಥಾಕೂರ್ ಡಕೌಟಾದ್ರು.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಅವರು ಆಕರ್ಷಕ ಅರ್ಧಶತಕ ದಾಖಲಿಸಿದ್ರು. ಕ್ಲಾಸ್ ಮತ್ತು ಮಾಸ್ ಆಟದ ಮೂಲಕ ಶ್ರೇಯಸ್ ಅಯ್ಯರ್ ಗಮನ ಸೆಳೆದ್ರು.
ಆದ್ರೆ 19.3ನೇ ಓವರ್ ನಲ್ಲಿ ಕ್ರೀಸ್ ಜೋರ್ಡಾನ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದ್ರು. ಶ್ರೇಯಸ್ ಅಯ್ಯರ್ ಅವರು 48 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನ ಸಹಾಯದಿಂದ 67 ರನ್ ಗಳಿಸಿದ್ರು.
ಅಂತಿಮವಾಗಿ ಟೀಮ್ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 124 ರನ್ ದಾಖಲಿಸಿತ್ತು. ಅಕ್ಸರ್ ಪಟೇಲ್ ಅಜೇಯ ಏಳು ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ ಮೂರು ರನ್ ಗಳಿಸಿದ್ರು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚೆರ್ 23ಕ್ಕೆ 4 ವಿಕೆಟ್ ಪಡೆದ್ರು. ಬೆನ್ ಸ್ಟೋಕ್ಸ್, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಆದೀಲ್ ರಶೀದ್ ತಲಾ ಒಂದು ವಿಕೆಟ್ ಉರುಳಿಸಿದ್ರು.
ಒಟ್ಟಾರೆಯಾಗಿ ಭಾರತದ ಇನಿಂಗ್ಸ್ ನಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್ ಗಳಿದ್ದವು.
#IndiavsEngland1st T20