ಪಾಕಿಸ್ತಾನದ ಕಾಲೇಜಿನಲ್ಲಿ ಯುವತಿ ಪ್ರಪೋಸ್ : ವಿದ್ಯಾರ್ಥಿಗಳ ಅಮಾನತು
ಪಾಕಿಸ್ತಾನ : ಕಾಲೇಜಿನ ಆವರಣದಲ್ಲಿ ಪ್ರಪೋಸ್ ಮಾಡಿ ತಬ್ಬಿಕೊಂಡಿದ್ದಕ್ಕೆ ಇಬ್ಬರು ವಿದ್ಯಾರ್ಥಿಗಳನ್ನ ಅಮಾನತು ಮಾಡಿರುವ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆಯಿತು.
ಪಾಕ್ ನ ಲಾಹೋರ್ ನಲ್ಲಿ ಒಬ್ಬ ಯುವತಿ ತನ್ನ ಪ್ರೇಯತಮನಿಗೆ ಪ್ರಪೋಸ್ ಮಾಡಿದ್ದು, ಈ ದೃಶ್ಯವಳಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಲಾಹೋರ್ ವಿಶ್ವವಿದ್ಯಾಲಯದ ವಿಶೇಷ ಶಿಸ್ತು ಸಮಿತಿ ಇಬ್ಬರು ವಿದ್ಯಾರ್ಥಿಗಳನ್ನ ಸಭೆಗೆ ಕರೆದಿತ್ತು.
ಆದ್ರೆ ಸಭೆಗೆ ಹಾಜರಾಗದ ಕಾರಣ ಯುವಕ ಯುವತಿಯನ್ನ ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ..?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಹೂಗುಚ್ಛವನ್ನ ಕೈನಲ್ಲಿ ಹಿಡಿದುಕೊಂಡು ಮಂಡಿಯೂರಿ ತನ್ನ ಪ್ರಿಯತಮನಿಗೆ ಪ್ರಪೋಸ್ ಮಾಡುತ್ತಾಳೆ.
ಆಗ ಆ ಹೂ ಗುಚ್ಛವನ್ನ ಸ್ವೀಕರಿಸುವ ಯುವಕ ಯುವತಿಯನ್ನ ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ.
ಇನ್ನು ಈ ವಿಡಿಯೋಗೆ ಸಾಕಷ್ಟು ನೆಟ್ಟಿಗರು ನಾನಾ ರೀತಿಯ ಕಮೆಂಟ್ ಗಳನ್ನ ಮಾಡುತ್ತಿದ್ದು, ಟ್ವಿಟ್ಟರ್ ನಲ್ಲಿ ವಿಡಿಯೋ ಟ್ರೆಡಿಂಗ್ ನಲ್ಲಿದೆ.
https://twitter.com/i/status/1370428799637192713










