ರಾಜಕಾರಣಿಗಳಿಗೆ ಜನ ಲಜ್ಜೆ ಹಾಗೂ ಮನಲಜ್ಜೆ ಇರ್ಬೇಕು : ಸಿ.ಟಿ.ರವಿ
ಚಿಕ್ಕಮಗಳೂರು : ರಾಜಕಾರಣಿಗಳಿಗೆ ಜನ ಲಜ್ಜೆ ಹಾಗೂ ಮನಲಜ್ಜೆ ಎರಡೂ ಇರಬೇಕು ಎಂದು ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿ.ಟಿ.ರವಿ, ಸಿಡಿ ಕೇಸ್ ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ.ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತು.
ಈಗ ಸಿಡಿ ಆಧಾರಿತ ರಾಜಕಾಕೀಯದ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು ರಾಜಕಾರಣಿಗಳಿಗೆ ಜನ ಲಜ್ಜೆ ಹಾಗೂ ಮನಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳೋದು ಮನಲಜ್ಜೆ, ಜನರಿಗೆ ಹೆದರೋದು ಮನಲಜ್ಜೆ ಎಂದು ಸಿ.ಟಿ.ರವಿ ವಿವರಿಸಿದ್ರು.
ಇದೇ ವೇಳೆ ತಮಿಳುನಾಡು ಚುನಾವಣೆ ಬಗ್ಗೆ ಮಾತನಾಡಿ, ತಮಿಳುನಾಡಿಗೆ ಅಣ್ಣಾಮಲೈ ಒಳ್ಳೆ ನಾಯಕತ್ವ ನೀಡುತ್ತಾರೆ.
234 ಸ್ಥಾನದಲ್ಲಿ 20 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದ್ದು, 10 ಸ್ಥಾನ ದಾಟಿ ಗೆಲುವು ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಅಲ್ಲದೆ ಎಐಡಿಎಂಕೆ ನೇತೃತ್ವದ ಎನ್.ಡಿ.ಎ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುತ್ತೆ.
ಅಣ್ಣಾಮಲೈಗೆ ಭಾರೀ ಜನಬೆಂಬಲ ವ್ಯಕ್ತವಾಗ್ತಿದೆ, ಅವ್ರು ಗೆಲ್ಲುತ್ತಾರೆ ಎಂದು ಹೇಳಿದ್ರು.










