ಬೆಂಗಳೂರು : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ವಿಶೇಷ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಫೋಟೋದೊಂದಿಗೆ ರಾಜ್ಯದ ಜನತೆಗೆ ಕರೆಯೊಂದನ್ನು ಕೊಟ್ಟಿದ್ದಾರೆ.
“ಬಿಸಿಲ ಬೇಗೆ, ಲಾಕ್ ಡೌನ್ ಬಿಸಿ ನಾಯಿ, ಬೆಕ್ಕುಗಳಂತಹ ಸಾಕು ಪ್ರಾಣಿಗಳಿಗೂ ತಟ್ಟಿದೆ. ಪಕ್ಷಿಗಳೂ ಸಹ ಆಹಾರ, ನೀರಿಗಾಗಿ ಪರಿತಪಿಸುತ್ತಿವೆ. ಸಾಧ್ಯವಾದಷ್ಟೂ ಅವುಗಳಿಗೆ ಆಹಾರ, ನೀರು ಸಿಗುವಂತೆ ಮಾಡೋಣ, ಮಾನವೀಯತೆ ಮೆರೆಯೋಣ” ಎಂದು ಸಿಎಂ ಮನವಿ ಮಾಡಿದ್ದಾರೆ.
ಬಿಸಿಲ ಬೇಗೆ, ಲಾಕ್ ಡೌನ್ ಬಿಸಿ ನಾಯಿ, ಬೆಕ್ಕುಗಳಂತಹ ಸಾಕು ಪ್ರಾಣಿಗಳಿಗೂ ತಟ್ಟಿದೆ. ಪಕ್ಷಿಗಳೂ ಸಹ ಆಹಾರ, ನೀರಿಗಾಗಿ ಪರಿತಪಿಸುತ್ತಿವೆ.
ಸಾಧ್ಯವಾದಷ್ಟೂ ಅವುಗಳಿಗೆ ಆಹಾರ, ನೀರು ಸಿಗುವಂತೆ ಮಾಡೋಣ, ಮಾನವೀಯತೆ ಮೆರೆಯೋಣ.#ಮನೆಯಲ್ಲೇಇರಿ@BSYBJP pic.twitter.com/z5qOOfyRAw— CM of Karnataka (@CMofKarnataka) April 10, 2020
ಸದ್ಯ ಸಿಎಂ ಬಿಎಸ್ ವೈ ಗಂಭೀರ ಸಮಸ್ಯೆಗಳ ನಡುವೆ ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ವಿವಿಧ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಒತ್ತಡದ ನಡುವೆಯೇ ಬಿಎಸ್ ವೈ ತಮ್ಮ ಮನೆಯ ಆವರಣದಲ್ಲಿ ಬೆಕ್ಕಿಗೆ ಹಾಲನ್ನು ನೀಡಿದ್ದಾರೆ. ಬೆಕ್ಕಿನ ಜೊತೆ ಇರುವ ಫೋಟೋವನ್ನು ಶೇರ್ ಮಾಡುವ ಮೂಲಕ ಜನರಿಗೆ ಮಾನವೀಯತೆ ಕರೆ ನೀಡಿದ್ದಾರೆ.








