ಬಣ್ಣ ಬದಲಾಗಿದೆ…! ಆದ್ರೆ, ಅದೇ ಆತ್ಮವಿಶ್ವಾಸ.. ಅದೇ ಆಕ್ರಮಣಕಾರಿ ಪ್ರವೃತ್ತಿ.. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ಮಂತ್ರ…!
Delhi Capitals unveil new jersey for IPL-14
14ನೇ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಹಳೆಯ ಜೆರ್ಸಿಯಲ್ಲಿ ಕೊಂಚ ಮಟ್ಟಿನ ಬದಲಾವಣೆ ಮಾಡಿಕೊಂಡಿರುವ ಹೊಸ ಡಿಸಿ ತಂಡದ ಹೊಸ ಜೆರ್ಸಿಯನ್ನು ವಿಭಿನ್ನವಾಗಿ ಅನಾವರಣಗೊಳಿಸಲಾಯ್ತು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿಯನ್ನು ಪುಟಾಣಿ ಮಕ್ಕಳು ಅನಾವರಣಗೊಳಿಸಿದ್ರು. ಇದೇ ವೇಳೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆರಂಭಿಕ ಶಿಖರ್ ಧವನ್ ಅವರು ಲೈವ್ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂವಾದವನ್ನು ನಡೆಸಿದ್ರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಚೇರಿಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಜೆರ್ಸಿಯನ್ನು ಅನಾವರಣಗೊಳಿಸಿತ್ತು. ಅಚ್ಚರಿಯಂದ್ರೆ ಹೊಸ ಜೆರ್ಸಿ ಆಟಗಾರರಿಗಿಂತ ಮೊದಲೇ ಅಭಿಮಾನಿಗಳ ಕೈಸೇರಿಕೊಂಡಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರಾದ ಕಿರಣ್ ಕುಮಾರ್ ಗಾಂಧಿ ಮತ್ತು ಸಿಇಒ ವಿನೋದ್ ಬಿಸ್ತ್ ಅವರು ಈ ವೇಳೆ ಉಪಸ್ಥಿತರಿದ್ದರು.
ನೀಲಿ ಬಣ್ಣ ಸ್ಥಿರತೆ ಮತ್ತು ಆತ್ಮವಿಶ್ವಾಸದ ಪ್ರತೀಕವಾದ್ರೆ, ಕೆಂಪು ಬಣ್ಣ ಆಕ್ರಮಣಕಾರಿಯ ಸಂಕೇತವಾಗಿದೆ. ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಬಾರಿ ಫೈನಲ್ ನಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
#Delhi Capitals #shreyashiyer #shikardhavan #rishabpant #prithvishaw #saakshatv #saakshatvsports #ipl 2021 #ipl #sports








