ಭಾರತ -ಇಂಗ್ಲೆಂಡ್ 5ನೇ ಟಿ-ಟ್ವೆಂಟಿ -ನಿರ್ಣಾಯಕ ಪಂದ್ಯದಲ್ಲಿ ಗೆಲುವು ಯಾರಿಗೆ..?
India vs England, 5th T20I Match Preview
ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟಿ-ಟ್ವೆಂಟಿ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಮಾರ್ಚ್ 20ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟಿ-ಟ್ವೆಂಟಿ ಪಂದ್ಯ ಉಭಯ ತಂಡಗಳಿಗೆ ಮಾಡುವ ಇಲ್ಲವೇ ಮಡಿ ಪಂದ್ಯವಾಗಿದೆ.
ಈಗಾಗಲೇ 2-2ರಿಂದ ಸರಣಿಯು ಸಮಬಲಗೊಂಡಿದೆ. ಹೀಗಾಗಿ ಸರಣಿ ಗೆಲ್ಲಲು ಈ ಪಂದ್ಯ ನಿರ್ಣಾಯಕವಾಗಲಿದೆ.
ಟೆಸ್ಟ್ ಸರಣಿಯನ್ನು 3-1ರಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಟಿ-ಟ್ವಂಟಿ ಸರಣಿಯನ್ನು ಕೈ ವಶ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಇನಿಂಗ್ಸ್ ಯಾರು ಆರಂಭಿಸುತ್ತಾರೆ ಅನ್ನೋದು ಪ್ರಶ್ನೆಯಾಗಿದೆ.
ಸರಣಿಯಲ್ಲಿ ಕಳಪೆ ಫಾರ್ಮ್ ನಲ್ಲಿರುವ ಆರಂಭಿಕ ಕೆ.ಎಲ್. ರಾಹುಲ್ ಗೆ ಮತ್ತೊಂದು ಅವಕಾಶ ಸಿಗುತ್ತಾ ? ಅಥವಾ ರೋಹಿತ್ ಜೊತೆ ಇಶಾನ್ ಕಿಶಾನ್ ಇನಿಂಗ್ಸ್ ಆರಂಭಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕು.
India vs England, 5th T20I Match Preview
ಇನ್ನುಳಿದಂತೆ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ನಾಲ್ಕನೇ ಪಂದ್ಯಕ್ಕೆ ಆಡಿರುವ ಆಟಗಾರರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಇನ್ನು ಇಂಗ್ಲೆಂಡ್ ತಂಡದಲ್ಲೂ ಕೂಡ ಅಷ್ಟೇ ಹೆಚ್ಚಿನ ಬದಲಾವಣೆಯನ್ನು ನಿರೀಕ್ಷೆ ಮಾಡುವಂತಿಲ್ಲ.
ಟೀಮ್ ಇಂಡಿಯಾ
ರೋಹಿತ್ ಶರ್ಮಾ, ಕೆ.ಎಲ್. ರಾಹುಲ್/ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ (ನಾಯಕ), ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್, ಭುವನೇಶ್ಚರ್ ಕುಮಾರ್, ರಾಹುಲ್ ಚಾಹರ್.
ಇಂಗ್ಲೆಂಡ್ ತಂಡ
ಜೇಸನ್ ರಾಯ್, ಜೋಸ್ ಬಟ್ಲರ್, ಡೇವಿಡ್ ಮಲಾನ್, ಜೋನಿ ಬೇರ್ ಸ್ಟೋವ್, ಬೆನ್ ಸ್ಟೋಕ್ಸ್, ಇಯಾನ್ ಮೊರ್ಗಾನ್ (ನಾಯಕ), ಸ್ಯಾಮ್ ಕುರನ್/ ಮೋಯಿನ್ ಆಲಿ, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚೆರ್, ಮಾರ್ಕ್ ವುಡ್, ಆದೀಲ್ ರಶೀದ್.
#India vs England #5th T20IMatch Preview #teamindia #saakshatv #saakshatvsports #viratkohli #k.l.rahul #rohithsharma #kannada #sports #cricket