ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ
England name squad for ODI series
ಭಾರತ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಮಾರ್ಚ್ 23, 26, 28ರಂದು ಪುಣೆ ಯಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ.
ಈಗಾಗಲೇ ಉಭಯ ತಂಡಗಳು ಪುಣೆಗೆ ಆಗಮಿಸಿವೆ. ಟೆಸ್ಟ್ ಮತ್ತು ಟಿ-ಟ್ವೆಂಟಿ ಸರಣಿ ಸೋತಿರುವ ಇಂಗ್ಲೆಂಡ್ ತಂಡವನ್ನು ಏಕದಿನ ಸರಣಿಯಲ್ಲೂ ಸೋಲಿಸುವ ಉತ್ಸಾಹದಲ್ಲಿದೆ ಟೀಮ್ ಇಂಡಿಯಾ.
ಅದೇ ರೀತಿ ಸರಣಿ ಸೋಲುಗಳ ಅವಮಾನದಿಂದ ಹೊರಬರಲು ಇಂಗ್ಲೆಂಡ್ ತಂಡ ಕೂಡ ತಿರುಗೇಟು ನೀಡುವ ಸಾಧ್ಯತೆಗಳಿವೆ. ಇದ್ರ ಬೆನ್ನಲ್ಲೇ ಇಂಗ್ಲೆಂಡ್ ತಂಡ ವೇಗಿ ಜೋಫ್ರಾ ಆರ್ಚೆರ್ ಅವರ ಸೇವೆಯಿಂದ ವಂಚಿತವಾಗಲಿದೆ.
England name squad for ODI series
ಜೋಫ್ರಾ ಆರ್ಚೆರ್ ಅವರು ಎಲ್ಬೋ ನೋವಿನಿಂದ ಬಳಲುತ್ತಿದ್ದಾರೆ. ಅವರು ತಕ್ಷಣವೇ ತವರಿಗೆ ಹೋಗಲಿದ್ದಾರೆ. ಅಲ್ಲದೆ ಮುಂಬರುವ ಐಪಿಎಲ್ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ಇದೆ.
ಟಿ-ಟ್ವೆಂಟಿ ಸರಣಿಯಲ್ಲಿದ್ದ ಜಾಕ್ ಬಾಲ್, ಕ್ರಿಸ್ಟ್ ಜೋರ್ಡಾನ್ ಮತ್ತು ಡೇವಿಡ್ ಮಲಾನ್ ಅವರು ಇಂಗ್ಲೆಂಡ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಇಂಗ್ಲೆಂಡ್ ಏಕದಿನ ತಂಡ
ಇಯಾನ್ ಮೊರ್ಗಾನ್ (ನಾಯಕ), ಮೋಯಿನ್ ಆಲಿ, ಜೋನಾಥನ್ ಬೇರ್ ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಟಾಮ್ ಕುರನ್, ಲಿಯಾಮ್ ಲಿವಿಂಗ್ ಸ್ಟೋನ್, ಮ್ಯಾಟ್ ಪರ್ಕಿನ್ಸನ್, ಆದೀಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೊಪ್ಲೇ, ಮಾರ್ಕ್ ವುಡ್
#teamindia #england #onedayteam #englandonedayteam #Eoin Morgan #viratkohli #saakshatv #saakshatvsports








