ಅಭಿವೃದ್ಧಿಯಲ್ಲಿ ಬಿಹಾರ ರಾಜ್ಯ ಹೊಸ ಮೈಲಿಗಲ್ಲು ಸ್ಥಾಪಿಸಲಿ : ಮೋದಿ..!
ನವದೆಹಲಿ : ಇಂದು ಬಿಹಾರ್ ದಿವಸ್ ಹಿನ್ನೆಲೆ ಬಿಹಾರ ರಾಜ್ಯದ ಎಲ್ಲಾ ಜನರಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ. ಈ ವೇಳೆ ಅಭಿವೃದ್ಧಿಯಲ್ಲಿ ಬಿಹಾರ ರಾಜ್ಯ ಹೊಸ ಮೈಲಿಗಲ್ಲು ಸ್ಥಾಪಿಸಲಿ ಎಂದು ಆಶೀಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಹಾರ ಅಭಿವೃದ್ಧಿ ಕಾರ್ಯಗಳು ಮುಂದುವರೆದು ಹೊಸ ಮೈಲಿಗಲ್ಲು ಸ್ಥಾಪಿಸುವಂತಾಗಲಿ ಎಂದು ಶುಭ ಕೋರಿದ್ದಾರೆ. ಇದೇ ವೇಳೆ ಬಿಹಾರ ತನ್ನ ಶ್ರೀಮಂತ ಸಂಸ್ಕಂತಿ ಹಾಗೂ ಪುರಾತನ ಕಾಲದ ಗತವೈಭವಗಳಿಗೆ ಹೆಸರುವಾಸಿಯಾಗಿದೆ. ಇಂತಹ ಬಿಹಾರದ ಜನರಿಗೆ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು ಎಂದಿದ್ದಾರೆ.
ಪಶ್ಚಿಮ ಬಂಗಾಳದ ಜನರು ‘ಖೇಲಾ ಶೇಶ್ ಹೋಬ್’ ಎಂದು ನಿರ್ಧರಿಸಿದಾಗ ಟಿಎಂಸಿ ‘ಖೇಲಾ ಹೋಬ್’ ಎನ್ನುತ್ತದೆ – ಪಿಎಂ ಮೋದಿ








