ಪಾಕ್ ನಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೊದಲ ಮದ್ರಸಾ ಆರಂಭ..!
ಪಾಕಿಸ್ತಾನ್ : ಪಾಕಿಸ್ತಾನದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗಾಗಿಯೇ ಮೊದಲ ಮದ್ರಸಾ ಆರಂಭವಾಗಿದೆ. ರಾಣಿ ಖಾನ್ ಎಂಬ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ ಇದನ್ನ ಆರಂಭಿಸಿದ್ದಾರೆ. ಪ್ರತ್ಯೇಕ ಮದ್ರಸಾ ತೆರೆದು ಲೈಂಗಿಕ ಅಲ್ಪಸಂಖ್ಯಾತರ ಶಿಕ್ಷಣದತ್ತ ಒತ್ತು ನೀಡಿದ್ದಾರೆ. ತಮ್ಮ ಉಳಿತಾಯದ ಹಣದಿಂದ ಮದ್ರಸಾ ತೆರೆದಿದ್ದಾರೆ.
ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಅನೇಕ ವಿಚಾರಗಳಲ್ಲಿ ಸಮಸ್ಯೆಗಳನ್ನ, ಎದುರಿಸುತ್ತಿದ್ದಾರೆ. ವಿವಿಧ ತೊಂದರೆ ಎದುರಿಸುತ್ತಿದ್ದಾರೆ. ಬಹುತೇಕ ಕುಟುಂಬಗಳು ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವುದಿಲ್ಲ. ಅವರನ್ನು ಮನೆಯಿಂದ ಹೊರಗೆ ಅಟ್ಟುತ್ತಾರೆ. ಹೀಗಾಗಿ ಅಂತಹವರ ಜೀವನಕ್ಕೆ ನೆರವಾಗುವ ಮಹದಾಸೆ ಹೊಂದಿರುವ ರಾಣಿ ಖಾನ್ ಮದ್ರಸಾ ತೆರೆದಿದ್ದಾರೆ.
ಈ ಮದ್ರಸಾದಲ್ಲಿ ಕುರಾನ್ ಹೇಳಿಕೊಡುತ್ತಿದ್ದಾರೆ. ಸರ್ಕಾರದಿಂದ ಅನುದಾನ ಬರದಿದ್ದರೂ, ಅಧಿಕಾರಿಗಳು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಖಾನ್ ಹೇಳಿದ್ದಾರೆ.
ಮತ್ತೆ ದೇಶದಲ್ಲಿ ಕೊರೊನಾ ರೌದ್ರಾವತಾರ..!
ಇನ್ಮುಂದೆ ಜೀವನ್ ಪ್ರಮಾಣ್ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ..!