ಶತಕ ವಂಚಿತ ಧವನ್, ಕೊಹ್ಲಿ, ರಾಹುಲ್, ಕೃನಾಲ್ ಅರ್ಧಶತಕ… ಇಂಗ್ಲೆಂಡ್ ಗೆ 318 ರನ್ ಗಳ ಸವಾಲು
india england first odi -Dhavan, kohli Krunal, Rahul power India to 317/5
ಒಂದು ನರ್ವಸ್ ನೈಂಟಿ.. ಎರಡು ಚಾಂಪಿಯನ್ನರ ಅರ್ಧಶತಕಗಳು.. ಒಂದು ಚೊಚ್ಚಲ ಪಂದ್ಯದ ಚೊಚ್ಚಲ ಅರ್ಧಶತಕ.. ಪರಿಣಾಮ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 317 ರನ್‍ಗಳನ್ನು ದಾಖಲಿಸಿದೆ.
ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಮತ್ತು ಶಿಖರ್ ಧವನ್ ಎಚ್ಚರಿಕೆಯ ಆಟವನ್ನಾಡಿದ್ರು. ಪರಿಣಾಮ ಮೊದಲ ವಿಕೆಟ್ ಗೆ 15.1 ಓವರ್ ಗಳಲ್ಲಿ 64 ರನ್ ಕಲೆ ಹಾಕಿದ್ರು. ರೋಹಿತ್ ಶರ್ಮಾ 28 ರನ್ ಗಳಿಸಿ ಬೆನ್ ಸ್ಟೋಕ್ಸ್ ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಇಂಗ್ಲೆಂಡ್ ಬೌಲರ್ ಗಳನ್ನು ಸುಸ್ತಾಗಿಸಿದ್ರು. ಎರಡನೇ ವಿಕೆಟ್ ಗೆ 105 ರನ್ ದಾಖಲಿಸಿದ್ರು. ಈ ಹಂತದಲ್ಲಿ ಆಕರ್ಷಕ ಅರ್ಧಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ 56 ರನ್ ಗಳಿಸಿ ಮಾರ್ಕ್ ವುಡ್ ಗೆ ಬಲಿಯಾದ್ರು.
ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಆರು ರನ್‍ಗಳಿಗೆ ಸುಸ್ತಾಗಿಬಿಟ್ರು. ಮತ್ತೊಂದೆಡೆ ಶಿಖರ್ ಧವನ್ ಕೇವಲ ಎರಡು ರನ್ ಗಳ ಅಂತರದಲ್ಲಿ ಶತಕ ವಂಚಿತರಾದ್ರು, 106 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 11 ಬೌಂಡರಿಗಳ ಸಹಾಯದಿಂದ 98 ರನ್ ಸಿಡಿಸಿ ನಿರಾಸೆಯಿಂದಲೇ ಪೆವಿಲಿಯನ್ ದಾರಿ ಹಿಡಿದ್ರು. ಹಾರ್ದಿಕ್ ಪಾಂಡ್ಯ ಒಂದು ರನ್ ಗೆ ಸೀಮಿತವಾದ್ರು.
ಬಳಿಕ ಇಂಗ್ಲೀಷ್ ಬೌಲರ್ ಗಳನ್ನು ಕಾಡಿದ್ದು ಕೆ.ಎಲ್. ರಾಹುಲ್ ಮತ್ತು ಕೃನಾಲ್ ಪಾಂಡ್ಯ. ಆರನೇ ವಿಕೆಟ್ ಗೆ ಇವರಿಬ್ಬರು 112 ರನ್ ಗಳನ್ನು ಕೇವಲ 57 ಎಸೆತಗಳಲ್ಲಿ ದಾಖಲಿಸಿದ್ರು.
ಫಾರ್ಮ್ ಕಂಡುಕೊಂಡ ಕೆ.ಎಲ್. ರಾಹುಲ್ 43 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ನೆರವಿನಿಂದ ಅಜೇಯ 62 ರನ್ ಸಿಡಿಸಿದ್ರು. ಹಾಗೇ ಚೊಚ್ಚಲ ಏಕದಿನ ಪಂದ್ಯವನ್ನಾಡುತ್ತಿರುವ ಕೃನಾಲ್ ಪಾಂಡ್ಯ ಕೂಡ 31 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 58 ರನ್ ದಾಖಲಿಸಿದ್ರು.
ಇಂಗ್ಲೆಂಡ್ ಪರ ಮಾರ್ಕ್ ವುಡ್ 75ಕ್ಕೆ 2 ವಿಕೆಟ್ ಪಡೆದ್ರೆ, ಬೆನ್ ಸ್ಟೋಕ್ಸ್ 34ಕ್ಕೆ ಮೂರು ವಿಕೆಟ್ ಕಬಳಿಸಿದ್ರು.
#teamindia #england #shikhardhavan #viratkohli #k.l.rahul #krunalpandya #cricket #saakshatv #saakshatvsports