ಸೇನಾ ಬಸ್ ಮೇಲೆ ನಕ್ಸಲ್ ದಾಳಿ : ಮೂವರು ಯೋಧರು ಹುತಾತ್ಮ
ಛತ್ತೀಸ್ ಘಡದ ನಾರಾಯಣಪುರದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.
ಸೇನಾ ಬಸ್ ಮೇಲೆ ನಕ್ಸಲರು ಐಇಡಿ ದಾಳಿ ನಡೆಸಿದ್ದು, ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಐಇಡಿ ಸ್ಫೋಟದ ನಂತರ ಬಸ್ ಪಲ್ಟಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗಾರ್ಗ್ ಮಾಹಿತಿ ನೀಡಿದ್ದಾರೆ.