ಬೆಂಗಳೂರು: ಇಂದು ಕನ್ನಡ ಕಲಾ ರಸಿಕರ ಆರಾಧ್ಯ ದೈವ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನ. ಅಣ್ಣಾವ್ರು ಇವತ್ತಿಗೆ 14 ವರ್ಷಗಳ ಹಿಂದೆ ಕರುನಾಡಿಗರನ್ನ ಅಗಲಿದರು.
2006ನೇ ಇಸವಿಯ ಏಪ್ರಿಲ್ 12 ಕನ್ನಡ ಚಿತ್ರರಂಗದ ಪಾಲಿನ ಕರಾಳ ದಿನ. ಅಂದು ಕನ್ನಡ ಕಂಠೀರವ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ರು. ಪ್ರತಿ ವರ್ಷ ಈ ದಿನದಂದು ಅಭಿಮಾನಿಗಳು ಅಣ್ಣಾವ್ರ ಸಮಾಧಿ ಬಳಿಗೆ ಭೇಟಿ ನೀಡುತ್ತಿದ್ದರು. ಈ ವರ್ಷ ಲಾಕ್ ಡೌನ್ ಹಿನ್ನೆಲೆ ಅಣ್ಣಾವ್ರ ಸಮಾಧಿಗೆ ಅಭಿಮಾನಿಗಳು ಭೇಟಿ ನೀಡಲು ಸಾಧ್ಯವಾಗ್ತಿಲ್ಲ. ಮತ್ತೊಂದೆಡೆ ಪುತ್ರ ರಾಘವೇಂದ್ರ ರಾಜಕುಮಾರ್ ಟ್ವೀಟ್ ಮಾಡಿ ತಂದೆಯ ನೆನಪು ಎಂದೆಂದಿಗೂ ಅಮರ ಎಂದಿದ್ದಾರೆ.








