ಸವರ್ಣಿಯರ ಕಿರುಕುಳ ತಾಳರಾರದೇ ಲೈವ್ ನಲ್ಲಿ ವಿಷ ಸೇವಿಸಿದ ದಲಿತ ಕುಟುಂಬ..!
ಬೆಂಗಳೂರು: ಸವರ್ಣಿಯರ ಕಿರುಕುಳ ತಾಳಲಾರದೇ ಕುಡುಂಬವೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹದೇವಪುರ ಚನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಲೈವ್ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ.
ವಿಷ ಸೇವಿಸಿದ ಕುಟುಂಬದವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಗ್ರಾಮದಲ್ಲಿ ದಲಿತ ಶ್ರೀನಿವಾಸ್ ಎಂಬುವವರ ಕುಟುಂಬದೊಂದಿಗೆ ಕೆಲ ಸವರ್ಣೀಯರು ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆಯುತ್ತಾ ಸುಮಾರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು.
ಇತ್ತೀಚೆಗೆ ಮತ್ತೆ ಖ್ಯಾತೆ ತೆಗೆದು ನಾಯಿ ವಿಚಾರಕ್ಕೆ ಶ್ರೀನಿವಾಸ್ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಶ್ರೀನಿವಾಸ್ ಕುಟುಂಬ ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ ನಗರದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಡಿ ಯುವತಿ ವಿಜಯಮಲ್ಯನೋ, ನೀರವ್ ಮೋದಿಯೋ..?
ತರಗತಿಯಲ್ಲೇ ನಶೆ ಏರಿಸಿಕೊಂಡು ಬಟ್ಟೆ ಬಿಚ್ಚು ಎಂದ ಶಿಕ್ಷಕ