ಪಂಕಜ್ ತ್ರಿಪಾಠಿಯಿಂದ ಶತ್ರುಘನ್ ಸಿನ್ಹಾವರೆಗೆ – ಬಿಹಾರಿ ನಟರ ವಿದ್ಯಾಭ್ಯಾಸ
ಬಾಲಿವುಡ್‌ನಲ್ಲಿ ಅನೇಕ ಬಿಹಾರ ನಟರಿದ್ದಾರೆ. ಶತ್ರುಘನ್ ಸಿನ್ಹಾ, ಮನೋಜ್ ವಾಜಪೇಯಿ ಯಿಂದ ಪಂಕಜ್ ತ್ರಿಪಾಠಿವರೆಗೆ ಅವರು ತಮ್ಮ ನಟನೆಯಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ತಮ್ಮ ನಟನೆಯಿಂದ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ಈ ನಟರ ವಿಧ್ಯಾಭ್ಯಾಸದ ಬಗ್ಗೆ ತಿಳಿದಿದೆಯೇ?
ಪಂಕಜ್ ತ್ರಿಪಾಠಿ
ಬಾಲಿವುಡ್‌ನ ಹಿರಿಯ ನಟ ಪಂಕಜ್ ತ್ರಿಪಾಠಿ ಜನಿಸಿದ್ದು ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಬೆಲ್ಸಾಂಡ್ ಗ್ರಾಮದಲ್ಲಿ.
ಇವರು ಮಗಧ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಇದರ ನಂತರ, ಪಂಕಜ್ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡಿದ್ದು ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಆಯ್ಕೆಯಾದರು . ಇಲ್ಲಿ ನಟನೆ ಕಲಿತ ನಂತರ ಪಂಕಜ್ ಮುಂಬೈಗೆ ಹೋದರು. ಆರಂಭದಲ್ಲಿ ಸಾಕಷ್ಟು ಸ್ಪರ್ಧೆಯನ್ನು ಅನುಭವಿಸಿದರೂ, ಇಂದು ಪಂಕಜ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು.
ಮನೋಜ್ ಬಾಜಪೇಯಿ
ಮನೋಜ್ ಬಾಜಪೇಯಿ ಜನಿಸಿದ್ದು ಬಿಹಾರದ ಪಶ್ಚಿಮ ಚಂಪಾರನ್‌ನ ಬೆಲ್ವಾ ಗ್ರಾಮದಲ್ಲಿ. ಇತ್ತೀಚೆಗೆ ಮನೋಜ್ ಅವರಿಗೆ ಮೂರನೇ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಲಾಗಿದೆ.
ಮನೋಜ್ ಬಾಜಪೇಯಿ ದೆಹಲಿ ವಿಶ್ವವಿದ್ಯಾಲಯದ ರಾಮ್‌ಜಾಸ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇದರ ನಂತರ ಅವರು ಮೂರು ಬಾರಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಅರ್ಜಿ ಸಲ್ಲಿಸಿದರು. ಆದಾಗ್ಯೂ, ಅವರ ಮೂರು ಸಂದರ್ಭಗಳಲ್ಲೂ ಆಯ್ಕೆಯಾಗಲಿಲ್ಲ. ನಂತರ ನಾಲ್ಕನೇ ಬಾರಿಗೆ ಮನೋಜ್ ಎನ್‌ಎಸ್‌ಡಿ ಯಲ್ಲಿ ಅರ್ಜಿ ಸಲ್ಲಿಸಿದಾಗ, ಆಯ್ಕೆಯಾದರು.
ಶತ್ರುಘನ್ ಸಿನ್ಹಾ
ಶತ್ರುಘನ್ ಸಿನ್ಹಾ ಅವರು ಪಾಟ್ನಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕಾಲೇಜು ನಂತರ, ಅವರು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಸೇರಿಕೊಂಡರು. ಬಾಲಿವುಡ್‌ನಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಶತ್ರುಘನ್ ಸಿನ್ಹಾ ಶೀಘ್ರವಾಗಿ ನಾಯಕನಾಗಿ ತನ್ನ ಛಾಪು ಮೂಡಿಸಿದರು.
ಸಂಜಯ್ ಮಿಶ್ರಾ
ಬಿಹಾರದ ದರ್ಭಂಗದಲ್ಲಿ ಜನಿಸಿದ ಸಂಜಯ್ ಮಿಶ್ರಾ ಸ್ನಾತಕೋತ್ತರ ಪದವಿ ಗಳಿಸಿದ ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದರು. ಇವರು 1989 ರಲ್ಲಿ ನಿಧನರಾದರು. ಅವರು ಮೊದಲು ಅಮಿತಾಬ್ ಬಚ್ಚನ್ ಅವರೊಂದಿಗೆ 1991 ರಲ್ಲಿ ಪಾನೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
ಪಾಲಕ್ ಪನೀರ್ https://t.co/j2Hh1uVmAo
— Saaksha TV (@SaakshaTv) March 23, 2021
ನಟಿ ಪ್ರೀತಿ ಜಿಂಟಾಗೆ ಕಿಸ್ ಮಾಡಿದ ರಿತೇಶ್, ಕೊಪಗೊಂಡು ಪತಿಗೆ ಹೊಡೆತ ನೀಡಿದ ಜೆನಿಲಿಯಾ !#entertainment #bollywood #cinema https://t.co/8Gm3XcVZnr
— Saaksha TV (@SaakshaTv) March 22, 2021
ಐದು ವರ್ಷಗಳ ಕಾಲಾವಧಿಗೆ ಉನ್ನತ ಭದ್ರತಾ ನೋಂದಣಿ ಫಲಕ( HSRP) ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ https://t.co/EFd7Nev5RZ
— Saaksha TV (@SaakshaTv) March 22, 2021
#PankajTripathi #ShatrughanSinha #bihariactors