ರಿಷಬ್ ಪಂತ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫುಲ್ ಡಿಟೇಲ್ಸ್…!
IPL 2021 – Rishabh Pant to lead Delhi Capitals – dc full team details
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೈನಿಂಗ್ ಸ್ಟಾರ್ ರಿಷಬ್ ಪಂತ್ ನೇಮಕಗೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡಿರುವುದರಿಂದ ರಿಷಬ್ ಪಂತ್ ಗೆ ನಾಯಕನ ಪಟ್ಟ ಒಲಿದು ಬಂದಿದೆ.
ಹಾಗೇ ನೋಡಿದ್ರೆ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಳೆದ ಎರಡು ಆವೃತ್ತಿಗಳಲ್ಲೂ ಅದ್ಭುತವಾದ ಪ್ರದರ್ಶನ ನೀಡಿತ್ತು. 2019ರಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2020ರಲ್ಲಿ ರನ್ನರ್ ಅಪ್ ಆಗಿತ್ತು.
ಇನ್ನು ಐಪಿಎಲ್ ಇತಿಹಾಸವನ್ನು ನೋಡುವುದಾದ್ರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಲ್ಲಿಯವರೆಗೆ ಪ್ರಶಸ್ತಿ ಗೆದ್ದಿಲ್ಲ. ಕಳೆದ ಬಾರಿ ಮೊದಲ ಫೈನಲ್ ಆಡಿದ್ದು ಶ್ರೇಷ್ಠ ಸಾಧನೆಯಾಗಿದೆ. ಇನ್ನುಳಿದಂತೆ 2008 ಮತ್ತು 9ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ರೆ, 2019ರಲ್ಲಿ ಪ್ಲೇ ಆಫ್ ಗೆ ಎಂಟ್ರಿಯಾಗಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
ಇನ್ನುಳಿದಂತೆ, 2010ರ;;ಒ ಐದನೇ ಸ್ಥಾನ, 2011ರಲ್ಲಿ 10ನೇ ಸ್ಥಾನ, 2013ರಲ್ಲಿ 9ನೇ ಸ್ಥಾನ, 2014ರಲ್ಲಿ 8ನೇ ಸ್ಥಾನ, 2015ರಲ್ಲಿ ಏಳನೇ ಸ್ಥಾನ ಹಾಗೂ 2016 ಮತ್ತು 2017ರಲ್ಲಿ ಆರನೇ ಸ್ಥಾನ, 2018ರಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿತ್ತು.
ಆರಂಭದಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಆಗಿದ್ದ ತಂಡ 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವಾಗಿ ಬದಲಾಗಿತ್ತು. ಜಿಎಮ್ ಆರ್ ಮತ್ತು ಜೆಎಸ್ ಡಬ್ಲ್ಯು ಮಾಲೀಕರಾಗಿದ್ದಾರೆ.
ಹಾಲಿ ತಂಡಕ್ಕೆ ರಿಷಬ್ ಪಂತ್ ನಾಯಕನಾದ್ರೆ, ರಿಕಿ ಪಾಂಟಿಂಗ್ ಹೆಡ್ ಕೋಚ್ ಆಗಿದ್ದಾರೆ. ಮಹಮ್ಮದ್ ಕೈಫ್ ಫೀಲ್ಡಿಂಗ್ ಕೋಚ್, ಪ್ರವೀಣ್ ಆಮ್ರೆ ಬ್ಯಾಟಿಂಗ್ ಕೋಚ್ ಹಾಗೂ ಜೇಮ್ಸ್ ರೆಡ್ಫೆಮ್ ಬೌಲಿಂಗ್ ಕೋಚ್ ಆಗಿದ್ದಾರೆ. ಈ ಹಿಂದೆ ಸೌರವ್ ಗಂಗೂಲಿ ಮೆಂಟರ್ ಆಗಿದ್ದರು. ರಾಹುಲ್ ದ್ರಾವಿಡ್ ಕೂಡ ಕೋಚ್ ಆಗಿದ್ದರು. ಸೆಹ್ವಾಗ್, ಗಂಭೀರ್ ಕೂಡ ತಂಡದ ನಾಯಕತ್ವ ವಹಿಸಿದ್ದರು.
ಯುವ ಆಟಗಾರರಿಗೆ ಹೆಚ್ಚು ಮನ್ನಣೆ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿಭಾವಂತ ಆಟಗಾರರನ್ನು ಹೊಂದಿದೆ.
ಒಟ್ಟಾರೆ, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 192 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 85 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 104 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮೂರು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ದೆಹಲಿ ಕ್ಯಾಪಿಟಲ್ಸ್
ರಿಷಬ್ ಪಂತ್ (ನಾಯಕ /ವಿಕೆಟ್ ಕೀಪರ್) , ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, , ಅಕ್ಸರ್ ಪಟೇಲ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ಆರ್. ಅಶ್ವಿನ್, ಲಲಿತ್ ಯಾದವ್, ಹರ್ಶಲ್ ಪಟೇಲ್, ಆವೇಶ್ ಖಾನ್, ಪ್ರವೀನ್ ದುಬೆ, ಕಾಗಿಸೊ ರಬಾಡ, ಆನ್ರಿಚ್ ನೊರ್ಟಝೆ, ಮಾರ್ಕಸ್ ಸ್ಟೋನಿಸ್, ಶಿಮ್ರೋನ್ ಹೆಟ್ಮೇರ್, ಕ್ರಿಸ್ ವೋಕ್ಸ್, ಡೇನಿಯಲ್ ಸ್ಯಾಮ್ಸ್ (ಖರೀದಿ ಮಾಡಿದ ಆಟಗಾರರು) ಟಾಮ್ ಕುರನ್, ಸ್ಟೀವನ್ ಸ್ಮಿತ್, ಸ್ಯಾಮ್ ಬಿಲ್ಲಿಂಗ್ಸ್, ಉಮೇಶ್ ಯಾದವ್, ರಿಪಾಲ್ ಪಟೇಲ್, ವಿಷ್ಣು ವಿನೋದ್, ಲುಕ್ಮಾನ್ ಮೆರಿವಾಲಾ, ಎಮ್. ಸಿದ್ಧಾರ್ಥ್