ಬೆಲೆ ಏರಿಕೆಗೆ ಬಿಜೆಪಿ ಸರ್ಕಾರವೇ ಕಾರಣ : ಸತೀಶ್ ಜಾರಕಿಹೊಳಿ
ಬೆಳಗಾವಿ : ಬೆಲೆ ಏರಿಕೆ ಯಾವುದೇ ಕಾರಣಕ್ಕೆ ಆದ್ರೂ ಅದಕ್ಕೆ ಬಿಜೆಪಿ ಸರ್ಕಾರವೇ ಕಾರಣ.
ಕೇಂದ್ರ ಸರ್ಕಾರದ ಏಳು ವರ್ಷದ ವೈಫಲ್ಯವನ್ನ ಜನರೇ ಹೇಳುತ್ತಿದ್ದಾರೆ ಎಂದು ಬೆಳಗಾವಿ ಲೋಕಸಭಾ ಉಪಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಇದು ಕಾರ್ಯಕರ್ತರು ಮಾಡುವ ಚುನಾವಣೆ.
ಮತದಾರರೇ ನಿರ್ಧಾರ ಮಾಡುವ ಚುನಾವಣೆ ಇದಾಗಿದೆ. ನಾವು ಎಲ್ಲಾ ಸಮುದಾಯದವರನ್ನ ಭೇಟಿಯಾಗುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮೂರು ಲಕ್ಷ ಅಂತರದಿಂದ ಗೆಲ್ಲುತ್ತೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಚುನಾವಣೆ ಫಲಿತಾಂಶ ಬರುವವರೆಗೂ ಹೇಳಲು ಆಗಲ್ಲ.
ಎರಡು ಲಕ್ಷದಿಂದ ಗೆದ್ದರು ಗೆಲವು ಒಂದು ವೋಟ್ ದಿಂದ ಗೆದ್ದರು ಗೆಲುವೇ ಎಂದ ತಿರುಗೇಟು ನೀಡಿದರು.
ಬೆಲೆ ಏರಿಕೆ ಮತ್ತು ಆಡಳಿತ ವಿರೋಧಿ ಅಲೆ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ದೇಶದಲ್ಲಿ ಅವರದೇ ಸರ್ಕಾರದ ಇದೆ.
ಯಾವುದೇ ಜವಾಬ್ದಾರಿ ನಂದು ಅಲ್ಲಾ ಅಂತಾ ಹೇಳಲು ಆಗಲ್ಲಾ ಎಂದು ಹೇಳಿದರು.