ಕೊರೊನಾ ಹೆಚ್ಚಳ : ತಿರುಮಲಕ್ಕೆ ಭಕ್ತರ ಪ್ರವೇಶದ ಮೇಲೆ ನಿರ್ಬಂಧ
ತಿರುಮಲ : ಕೊರೊನಾ ಎರಡನೇ ಅಲೆ ದೇಶದಲ್ಲಿ ಜೋರಾಗಿದ್ದು, ನೆರೆಯ ಆಂಧ್ರ ಪ್ರದೇಶದಲ್ಲೂ ಹೆಮ್ಮಾರಿಯ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಪ್ರವೇಶದ ಮೇಲೆ ನಿರ್ಬಂಧ ಹೇರಲು ನಿರ್ಧರಿಸಿದೆ.
ಈ ಬಗ್ಗೆ ಟಿಟಿಡಿ ನಿರ್ವಹಣಾ ಸಮಿತಿ ಮಾಹಿತಿ ನೀಡಿದ್ದು, ದೇವಾಲಯದ ಸರ್ವ ದರ್ಶನದ ದೈನಂದಿನ ಟೋಕನ್ ವಿತರಣೆಯನ್ನು 22 ಸಾವಿರದಿಂದ 15 ಸಾವಿರಕ್ಕೆ ಇಳಿಸುವುದು ಮತ್ತು ಆನ್‍ಲೈನ್ ವಿಶೇಷ ದರ್ಶನ ಟಿಕೆಟ್‍ಗಳನ್ನೂ
ಕಡಿಮೆ ಮಾಡಲಾಗುವುದು ಎಂದು ತಿಳಿಸಿದೆ.
ಸದ್ಯಕ್ಕೆ ದೇಗುಲ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಎಲ್ಲಾ ವಾಹನಗಳನ್ನು ಅಲಿಪಿರಿಯಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ.