ಎಚ್ಚರ ಎಚ್ಚರ : ರಾಜ್ಯದಲ್ಲಿ ಕಂಟ್ರೋಲ್ ತಪ್ಪುತ್ತಿದೆ ಕೊರೊನಾ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಬುಧವಾರ ಒಂದೇ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಒಂದೇ ದಿನ 26 ಜನರನ್ನ ಹೆಮ್ಮಾರಿ ಬಲಿ ಪಡೆದುಕೊಂಡಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬುಧವಾರ 4,225 ಪ್ರಕರಣಗಳು ವರದಿಯಾದೆ. ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 9,97,004ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ ಹೆಮ್ಮಾರಿಗೆ 12,567 ಜೀವ ಕಳೆದುಕೊಂಡಿದ್ದಾರೆ.
ಇನ್ನುಳಿದಂತೆ ರಾಜ್ಯದಲ್ಲಿನ್ನು 28,248 ಸಕ್ರಿಯ ಪ್ರಕರಣಗಳಿವೆ. ಇನ್ನ ಬೆಂಗಳೂರಲ್ಲಿ ಬುಧವಾರ 2,928 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಜಿಲ್ಲಾವಾರು ವರದಿ
ಬೆಂಗಳೂರು ಗ್ರಾಮಾಂತರ 80, ಬೆಂಗಳೂರು ನಗರ 2,928, ಬೀದರ್ 159, ಚಾಮರಾಜನಗರ 3, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 16, ಚಿತ್ರದುರ್ಗ 12, ದಕ್ಷಿಣ ಕನ್ನಡ 43, ಬಾಗಲಕೋಟೆ 8, ಬಳ್ಳಾರಿ 68, ಬೆಳಗಾವಿ 39, ದಾವಣಗೆರೆ 16, ಧಾರವಾಡ 62, ಗದಗ 14, ಹಾಸನ 74, ಹಾವೇರಿ 1, ಕಲಬುರಗಿ 137, ಕೊಡಗು 18, ಕೋಲಾರ 20, ಕೊಪ್ಪಳ 20, ಮಂಡ್ಯ 39, ಮೈಸೂರು 142, ರಾಯಚೂರು 22, ರಾಮನಗರ 6, ಶಿವಮೊಗ್ಗ 31, ತುಮಕೂರು 138, ಉಡುಪಿ 56, ಉತ್ತರ ಕನ್ನಡ 37, ವಿಜಯಪುರ 15 ಮತ್ತು ಯಾದಗಿರಿಯಲ್ಲಿ 10 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.









