ಟೀಮ್ ಇಂಡಿಯಾದ ಆಯ್ಕೆಗೆ ಯೋ ಯೋ ಫಿಟ್ ನೆಸ್ ಟೆಸ್ಟ್ ಮಾನದಂಡವಾಗಬಾರದು – ವೀರೇಂದ್ರ ಸೆಹ್ವಾಗ್
Sachin, Dada, VVS would fail yo-yo test’- Virender Sehwag
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಾದ್ರೆ ಕೇವಲ ಪ್ರತಿಭೆ, ಕೌಶಲ್ಯಗಳು ಇದ್ರೆ ಸಾಕಾಗುವುದಿಲ್ಲ. ಫಿಟ್ ನೆಸ್ ಕೂಡ ಮುಖ್ಯ. ಅದ್ರಲ್ಲೂ ಯೋ ಯೋ ಫಿಟ್ ನೆಸ್ ಟೆಸ್ಟ್ ನಲ್ಲಿ ಪಾಸಾದ್ರೆ ಮಾತ್ರ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು.
ಒಂದು ವೇಳೆ ಯೋ ಯೋ ಟೆಸ್ಟ್ ನಲ್ಲಿ ಫೇಲ್ ಆದ್ರೆ ಟೀಮ್ ಇಂಡಿಯಾದಿಂದ ಹೊರಗುಳಿಯುವುದು ಖಚಿತ. ಇದಕ್ಕೆ ಉತ್ತಮ ನಿರ್ದಶನ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾದ ವರುಣ್ ಚಕ್ರವರ್ತಿ ಮತ್ತು ರಾಹುಲ್ ಟೆವಾಟಿಯಾ.
ಇವರಿಬ್ಬರು ಟೀಮ್ ಇಂಡಿಯಾಗೆ ಆಯ್ಕೆಯಾದ್ರೂ ಯೋ ಯೋ ಫಿಟ್ ನೆಸ್ ಟೆಸ್ಟ್ ನಲ್ಲಿ ಫೇಲಾಗಿದ್ರು. ಹೀಗಾಗಿ ತಂಡದಲ್ಲಿ ಅವಕಾಶ ಸಿಗಲಿಲ್ಲ. ರಾಹುಲ್ ಟೆವಾಟಿಯಾ ಎರಡನೇ ಬಾರಿಯ ಟೆಸ್ಟ್ ನಲ್ಲಿ ಪಾಸಾಗಿದ್ದರು.
ಇದೀಗ ಯೋ ಯೋ ಫಿಟ್ ನೆಸ್ ಟೆಸ್ಟ್ ಬಗ್ಗೆ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ.
ಅದರಲ್ಲೂ ವೀರೇಂದ್ರ ಸೆಹ್ವಾಗ್ ಯೋ ಯೋ ಫಿಟ್ ನೆಸ್ ಟೆಸ್ಟ್ ನ ಮಾನದಂಡಗಳನ್ನು ಪ್ರಶ್ನೆ ಮಾಡಿದ್ದಾರೆ.
ಟೀಮ್ ಇಂಡಿಯಾದ ಆಯ್ಕೆಗೆ ಯೋ ಯೋ ಫಿಟ್ ನೆಸ್ ಟೆಸ್ಟ್ ಮಾನದಂಡವನ್ನಾಗಿಸುವುದು ಸರಿಯಲ್ಲ. ತಂಡದ ಆಯ್ಕೆಗೆ ಕೌಶಲ್ಯ ಮುಖ್ಯವಾಗಿರುತ್ತದೆ. ಯೋ ಯೋ ಟೆಸ್ಟ್ ನಲ್ಲಿ ಪಾಸಾಗಿದ್ರೂ ಕೌಶಲ್ಯ ಇಲ್ಲದಿದ್ರೆ ಏನು ಪ್ರಯೋಜನವಾಗಲ್ಲ. ಹೀಗಾಗಿ ಕೌಶಲ್ಯಕ್ಕೆ ಹೆಚ್ಚಿನ ಮಹತ್ವದ ನೀಡಬೇಕು. ಫೀಲ್ಡಿಂಗ್, ಬ್ಯಾಟಿಂಗ್ ಜೊತೆ ಬೌಲರ್ ಗಳು ಹತ್ತು ಓವರ್ ಗಳನ್ನು ಹಾಕುವಷ್ಟು ಫಿಟ್ ನೆಸ್ ಇದ್ರೆ ಸಾಕು. ಆಟಗಾರನಲ್ಲಿ ಕೌಶಲ್ಯಗಳಿದ್ರೆ ನಿಧಾನಗತಿಯಲ್ಲಿ ಫಿಟ್ ನೆಸ್ ಕೂಡ ಸುಧಾರಣೆಯಾಗುತ್ತದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ದಶಕಗಳ ಹಿಂದೆ ಯೋ ಯೋ ಟೆಸ್ಟ್ ಅನ್ನು ಮಾನದಂಡವಾಗಿರಿಸಕೊಳ್ಳುತ್ತಿದ್ರೆ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಟೀಮ್ ಇಂಡಿಯಾದ ಪರ ಆಡ್ತಾನೆ ಇರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.








