ಸಿಎಂ ಬಿಎಸ್ ವೈ ವಿರುದ್ಧ ಈಶ್ವರಪ್ಪ ದೂರು – ಹಿರಿಯ ಸಚಿವರ ನಡೆ ಎಷ್ಟು ಸರಿ – ರೇಣುಕಾಚಾರ್ಯ
ಈಶ್ವರಪ್ಪ ಬಿಎಸ್ ವೈ ವಿರುದ್ಧ ದೂರು ನೀಡಿದ ವಿಚಾರವಾಗಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರು ಹಿರಿಯರು. ರಾಜ್ಯಪಾಲರಿಗೆ ದೂರು ನೀಡಿದ್ದು ಎಷ್ಟರ ಮಟ್ಟಿಗೆ ಸರಿ. ಸಿಎಂ ವಿರುದ್ಧ ಒಬ್ಬರು ಸಚಿವರು ದೂರು ನೀಡಿದ್ದು ಇದು ಮೊದಲ ಬಾರಿಗೆ. ನಾವು ಎಲ್ಲಾ ಶಾಸಕರು ಜೆ ಪಿ ನಡ್ಡಾ ಅಮಿತ್ ಷಾ ಅವರಿಗೆ ದೂರು ನೀಡುತ್ತೆವೆ. ನಮ್ಮ ಹತ್ರ ದಾಖಲಾತಿಗಳು ಇದೆ ಈಶ್ವರಪ್ಪ ಅವರು ಎಷ್ಟು ಅನುದಾನ ತಮ್ಮ ಇಲಾಖೆಯಿಂದ ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ ಅಂತ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಉಪಚುನಾವಣೆ ಸಮಯದಲ್ಲಿ ಪದೇ ಪದೇ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಕೊಡೊದು ಸರಿಯಲ್ಲ. ಈ ಬಗ್ಗೆ ವರಿಷ್ಡರ ಗಮನಕ್ಕೆ ತರುತ್ತೇವೆ. ಇದೊಂದು ಪ್ರಮುಖವಾದ ಖಾತೆ ಅದನ್ನು ಅವರು ಹೊತ್ತಿದ್ದಾರೆ. ಇವರು ದೂರು ಕೊಟ್ಟಿದ್ದಾರೆ ಅಂದರೆ ಸಿಎಂ ಮೇಲೆ ವಿಶ್ವಾಸ ಇಲ್ಲ ಅಂತಾ. ನೀವು ಇವಾಗ ಪಕ್ಷಕ್ಕೆ ಮುಜುಗರ ತರುವ ರೀತಿ ಕೆಲಸ ಮಾಡ್ತಿದ್ದೀರಿ. ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿ ಪಕ್ಚಕ್ಕೆ ಮುಜುಗರ ಮಾಡಿದ್ರಿ. ಆಮೇಲೆ ಯಡಿಯೂರಪ್ಪರ ಬಗ್ಗೆ ವಿನಾಕಾರಣ ಹೇಳಿಕೆ ಕೊಟ್ಟಿದ್ರಿ. ಇವಾಗ ದೇಶದಲ್ಲೇ ಮೊದಲ ಬಾರಿಗೆ ಒಬ್ಬ ಸಿಎಂ ಮೇಲೆ ಸಚಿವರಾಗಿ ದೂರು ಕೊಟ್ಟಿರೋದು. ನಾವು ಶೀಘ್ರವೇ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ದೂರು ಕೊಡ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಗ್ರಾಮಾಣೀಭಿವೃದ್ದಿ ಇಲಾಖೆಯ ಅನುದಾನದ ಬಗ್ಗೆ, ಹಾಗೂ ಅವ್ರು ಬೇಕಾಬಿಟ್ಟಿ ಅನುದಾನ ಬಿಡುಗಡೆ ಮಾಡಿದ್ರು. ಹೀಗಾಗಿ ಈ ಬಗ್ಗೆ ಕೂಡಲೇ ನಾವು ಹೈಕಮಾಂಡ್ ಗೆ ದೂರು ಕೊಡ್ತೇವೆ.. ಈಶ್ವರಪ್ಪಗೆ ಏನೇ ಇದ್ರು ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಬೇಕಿತ್ತು. ಅದು ಬಿಟ್ಟು ಸಿಎಂ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು. ಸಿಎಂ ಮೇಲಿನ ನಿಮ್ಮ ದೂರು ಅಕ್ಷಮ್ಯ ಅಪರಾಧ. ಸಿಎಂ ಮರೀಸ್ವಾಮಿಗೆ ಒಬ್ನರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಿಲ್ಲ, ಬೆಂಗಳೂರು ನಗರದಲ್ಲಿರುವ ಒಟ್ಟು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ೬೫ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ.
ಅಲ್ದೇ ಈಶ್ವರಪ್ಪ ವಿರುದ್ದ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಉಪ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಸಚಿವರ ವರ್ತನೆ ಸರಿಯಲ್ಲ. ಹೀಗಾಗಿ ಇದು ತಪ್ಪು, ಇವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ವರಿಷ್ಟರಿಗೆ ದೂರು ಕೊಡ್ತೇವೆ ಎಂದು ಈಶ್ವರಪ್ಪ ವಿರುದ್ಧ ಕೆಂಡಕಾರಿದ್ದಾರೆ.
ಸಿಎಂ ರಾಜೀನಾಮೆ ಕೊಡಲಿ… ಇಲ್ಲಾ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ – ಡಿಕೆಶಿ
ಸಿಎಂ ಬಿಎಸ್ ವೈ ವಿರುದ್ಧ ದೂರು ಸಲ್ಲಿಸಿದ ಈಶ್ವರಪ್ಪ ನಡೆ ವಿರುದ್ಧ ಬಿ.ಸಿ ಪಾಟೀಲ್ ಬೇಸರ..!








